ಕ್ರೀಡೆ

ನಿಯಮ ಉಲ್ಲಂಘನೆ: ರಾಜಸ್ಥಾನ ರಾಯಲ್ಸ್‌ಗೆ ರು 98 ಕೋಟಿ ದಂಡ

ನವದೆಹಲಿ: ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ ಹಾಗೂ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಒಡೆತನದ ಐಪಿಎಲ್ ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಮೇಲೆ ಕೇಂದ್ರ ಜಾರಿ ನಿರ್ದೇಶನಾಲಯ (ಇಡಿ) ರು 98.5 ಕೋಟಿ ದಂಡವನ್ನು ವಿಧಿಸಿದೆ.
ರಾಜಸ್ಥಾನ ರಾಯಲ್ಸ್ ತಂಡದ ಫ್ರಾಂಚೈಸಿ ವಿರುದ್ಧ ಹಣಕಾಸು ಅಕ್ರಮಗಳ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ವಿದೇಶಿ ವಿನಿಮಯ ನಿರ್ವಹಣಾ ನೀತಿ ಸಂಹಿತೆ (ಫೆಮಾ)ಯ ಅಡಿಯಲ್ಲಿ ಎರಡು ವರ್ಷಗಳಿಂದ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿತ್ತು.
ಈ ತನಿಖೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಹಣಕಾಸು ಅಕ್ರಮಗಳನ್ನು ಮಾಡಿರುವುದು ಹಾಗೂ ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಡಿ, ಆರ್‌ಆರ್ ಫ್ರಾಂಚೈಸಿಯ ವ್ಯವಸ್ಥಾಪಕ ಮಂಡಳಿಗೆ ರು 98.5 ಕೋಟಿ ಮೊತ್ತ ದಂಡಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ನೋಟಿಸ್‌ಗಳನ್ನು ಕಳುಹಿಸಿದೆ.
ದಂಡದ ಪ್ರಮಾಣ, ಗಡುವು: ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಜೈಪುರ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ಜೆಐಪಿಎಲ್) ಹಾಗೂ ರಾಜಸ್ಥಾನ ರಾಯಲ್ಸ್‌ನ ಒಡೆತನ ಹೊಂದಿರುವವರಿಗೆ ಅದರ ನಿರ್ದೇಶಕರಿಗೆ ರು 50 ಕೋಟಿ, ಮಾರಿಷಸ್ ಮೂಲದ ಎಎಂ ಸ್ಪೋರ್ಟಿಂಗ್ ಹೋಲ್ಡಿಂಗ್ ಸಂಸ್ಥೆಗೆ ರು 34 ಕೋಟಿ ದಂಡ ವಿಧಿಸಲಾಗಿದೆ. ಇವಲ್ಲದೇ, ರು 14.5 ಕೋಟಿ ಮೊತ್ತ ದಂಡದ ನೋಟಿಸ್ ಅನ್ನು ಎಸ್‌ಡಿ ಇನ್ವೆಸ್ಟ್‌ಮೆಂಟ್ಸ್ (ಯುನೈಟೆಡ್ ಕಿಂಗ್‌ಡಮ್) ಸಂಸ್ಥೆಗೆ ನೀಡಲಾಗಿದೆ.
ದಂಡವನ್ನು 45 ದಿನಗಳೊಳಗಾಗಿ, ಪಾವತಿಸುವಂತೆಯೂ ಸೂಚಿಸಲಾಗಿದೆ.
ಎಲ್ಲರ ಮೇಲೂ ಕಣ್ಣು: ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಫ್ರಾಂಚೈಸಿಗಳೂ ಹಣಕಾಸು ಅವ್ಯವಹಾರಗಳಲ್ಲಿ ನಿರತವಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ, ಎಚ್ಚೆತ್ತಿದ್ದ ಜಾರಿ ನಿರ್ದೇಶನಾಲಯ, ತನಿಖೆಯನ್ನು ಕೈಗೊಂಡಿತ್ತಲ್ಲದೇ, ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ಫ್ರಾಂಚೈಸಿಗಳ ಹಣಕಾಸು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ತನಿಖೆಗೆ ಸಂಬಂಧಿಸಿದಂತೆ, ಐಪಿಎಲ್ ತಂಡವೊಂದರ ಮಾಲೀಕರಿಗೆ ದಂಡ ಕಟ್ಟಲು ಜಾರಿ ನಿರ್ದೇಶನಾಲಯ ನೋಟಿಸ್ ನೀಡುತ್ತಿರುವುದು ಇದೇ ಮೊದಲು. ಅದರಲ್ಲೂ, ಐಪಿಎಲ್ ಆರನೇ ಆವೃತ್ತಿಗಾಗಿ ಭಾನುವಾರ ಚೆನ್ನೈನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಗಿದ ಒಂದು ದಿನದ ಅಂತರದಲ್ಲೇ ನೋಟಿಸ್ ಜಾರಿಯಾಗಿದೆ.
ಇತರರಿಗೂ ನೋಟಿಸ್: ಇತರ ಐಪಿಎಲ್ ಪ್ರಾಂಚೈಸಿಗಳ ವಿರುದ್ಧದ ತನಿಖೆಯಲ್ಲೂ ಅವ್ಯವಹಾರಗಳು ಕಂಡುಬಂದಿದ್ದು, ಈವರೆಗೆ ಐಪಿಎಲ್ ಆಡಿರುವ ಎಲ್ಲಾ ತಂಡಗಳ ವ್ಯವಸ್ಥಾಪಕ ಮಂಡಳಿಗಳ ಮಾಲೀಕರಿಗೆ ರು 2000 ಮೊತ್ತದ ದಂಡ ಪಾವತಿಗಾಗಿ ಇದುವರೆಗೆ 24 ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)