ಕ್ರೀಡೆ

ನಾಕೌಟ್ ಹಂತಕ್ಕೆ ದಕ್ಷಿಣ ಆಫ್ರಿಕಾ ದಾಂಗುಡಿ

ಕಟಕ್: ಮಾರಿಜನ್ನೆ ಕಪ್ಪ ಅವರ ಆಲ್ರೌಂಡ್ ಪ್ರದರ್ಶನದೊಂದಿಗೆ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಪಾಕಿಸ್ತಾನದ ವಿರುದ್ಧ 126ರನ್‌ಗಳ ಅಂತರದಿಂದ ಜಯ ಸಾಧಿಸುವ ಮೂಲಕ, ಮಹಿಳಾ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಪರ 150 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದ ಮಾರಿಜನ್ನೆ ನಿಗದಿತ ಓವರ್‌ಗಳಲ್ಲಿ ತಂಡ 207 ರನ್ ಗಳಿಸಲು ನೆರವಾದರು.  ನಂತರ, ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 29.4 ಓವರ್‌ಗಳಲ್ಲಿ 81ರನ್ ಗಳಿಸಿ ಆಲೌಟ್ ಆಯಿತು. ಮೂರು ಲೀಗ್ ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು 2 ಪಾಯಿಂಟ್ ಗಳಿಸಿದ ದಕ್ಷಿಣ ಆಫ್ರಿಕಾ, ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 207/5
(50 ಓವರ್)
ಮಾರಿಜನ್ನೆ ಕಪ್ಪ್ ಅಜೇಯ 102
ನೀಕೇರಕ್ ಅಜೇಯ 55
ಬೌಲಿಂಗ್: ಖುನಿತಾ ಜಲೀಲ್ 30/2, ಆಸ್ಮಾವೀಯಾ ಇಕ್ಬಾಲ್ 31/2
ಪಾಕಿಸ್ತಾನ 81/10 (29.4 ಓವರ್)
ಸಿದ್ರಾ ಅಮೀನ್ 15, ಆಸ್ಮಾವೀಯಾ 14
ಬೌಲಿಂಗ್: ಕಪ್ಪ 18/3, ಲೆಟ್‌ಸೋಲೊ 17/2
ಪಂದ್ಯಶ್ರೇಷ್ಠ: ಕಪ್ಪ್ (ದಕ್ಷಿಣ ಆಫ್ರಿಕಾ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ