ಕ್ರೀಡೆ

ವಿಶ್ವ ಲೀಗ್ ಹಾಕಿ: ಸಂದೀಪ್ ಕಡೆಗಣನೆ

ನವದೆಹಲಿ: ಹಾಕಿ ಇಂಡಿಯಾ ಲೀಗ್‌ನಲ್ಲಿ (ಎಚ್‌ಐಎಲ್) ಉತ್ತಮ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರೂ, ಖ್ಯಾತ ಡ್ರಾಗ್ ಫ್ಲಿಕರ್ ಸಂದೀಪ್ ಸಿಂಗ್ ಅವರನ್ನು ಹೀರೋ ಹಾಕಿ ವಿಶ್ವ ಲೀಗ್‌ನ 2ನೇ ಸುತ್ತಿನಲ್ಲಿ ಭಾರತ ತಂಡಕ್ಕೆ ಪರಿಗಣಿಸಲಾಗಿಲ್ಲ. ಎಚ್‌ಐಎಲ್‌ನಲ್ಲಿ ಅತಿ ಹೆಚ್ಚು (11) ಗೋಲು ದಾಖಲಿಸಿರುವ ಸಂದೀಪ್ ಅವರನ್ನು ತಂಡದಿಂದ ಕಡೆಗಣಿಸಿರುವುದು ಅಚ್ಚರಿ ಮೂಡಿಸಿದೆ.
ಫೆಬ್ರವರಿ 18ರಿಂದ 24ರವರೆಗೆ ರಾಜಧಾನಿ ದೆಹಲಿಯಲ್ಲಿನ ಧ್ಯಾನ್‌ಚಂದ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ, ಭಾರತ ತಂಡವನ್ನು ಸರ್ದಾರ್ ಸಿಂಗ್ ಅವರು ಮುನ್ನಡೆಸಲಿದ್ದಾರೆ.
ಆದರೆ, ತಂಡ ಆಯ್ಕೆ ಮಾಡಿದ ಸೈದ್ ಅಲಿ, ಮುಖ್ಯ ಕೋಚ್ ಮೈಕೆಲ್ ನಾಬ್ಸ್ ಮತ್ತು ಸರ್ಕಾರಿ ಅಧೀಕ್ಷಕ ಹರ್ಬಿಂದರ್ ಸಿಂಗ್ ಅವರು, ಸಂದೀಪ್ ಅವರನ್ನು ಆರು ಹೆಚ್ಚುವರಿ ಆಟಗಾರರಲ್ಲಿ ಸೇರಿಸಿದ್ದಾರೆ.  ಡ್ರ್ಯಾಗ್ ಫ್ಲಿಕ್ ಸ್ಪೆಷೆಲಿಸ್ಟ್ ವಿ.ಆರ್. ರಘುನಾಥ್ ಅವರು ತಂಡದ ಉಪನಾಯಕರಾಗಿ ಮುಂದುವರಿದಿದ್ದಾರೆ. ದೋಹಾದಲ್ಲಿ ನಡೆದ ಏಷ್ಯಾ ಚಾಂಪಿಯನ್ಸ್ ಟ್ರೋಫಿ ರನ್ನರ್ ಆಪ್ ಪ್ರಶಸ್ತಿ ಪಡೆದ ಭಾರತ ತಂಡದಲ್ಲಿದ್ದ ಗುರ್ಮೈಲ್ ಸಿಂಗ್, ಫಾರ್‌ರ್ಡರ್ ಎಸ್.ಕೆ ಉತ್ತಪ್ಪ, ಆಕಾಶದೀಪ ಸಿಂಗ್ ಹಾಗೂ ಯುವರಾಜ್ ವಾಲ್ಮಿಕಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹಾಕಿ ವಿಶ್ವ ಲೀಗ್ 2ನೇ ಸುತ್ತು, ಹಾಲೆಂಡ್‌ನಲ್ಲಿ ನಡೆಯಲಿರುವ ಎಫ್‌ಐಎಚ್‌ನ ಹಾಕಿ ವಿಶ್ವಕಪ್ 2014ರ ಅರ್ಹತಾ ಪಂದ್ಯಾವಳಿಯೂ ಆಗಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ. ಎಚ್‌ಐಎಲ್ ಮುಕ್ತಾ ಯದ ನಂತರ ಫೆಬ್ರವರಿ 11ರಿಂದ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಹಾಕಿ ವಿಶ್ವ ಲೀಗ್ 2ನೇ ಸುತ್ತಿನ ತಯಾರಿಗೆ ಭಾರತ ತಂಡಕ್ಕೆ ಶಿಬಿರ ನಡೆಯಲಿದೆ.
ತಂಡ: ಪಿ.ಆರ್. ಶ್ರೀಜೇಶ್ (ಗೋಲ್ ಕೀಪರ್), ಸರ್ದಾರ್ ಸಿಂಗ್ (ನಾಯಕ), ವಿ.ಆರ್. ರಘುನಾಥ್ (ಉಪನಾಯಕ), ರೂಪಿಂದರ್ ಪಾಲ್ ಸಿಂಗ್, ಹರ್ಬಿರ್ ಸಿಂಗ್. ಬೀರೇಂದ್ರ ಲಕ್ರಾ, ಮನ್‌ಪ್ರೀತ್ ಸಿಂಗ್, ಕೊತಾಜೀತ್ ಸಿಂಗ್, ಖಡಂಗಬಾಮ, ಗುರ್ಜಿಂದರ್ ಸಿಂಗ್.
ಮುನ್ನಡೆ ಆಟಗಾರರು: ದನೀಶ್ ಮುಜ್ತಾಬಾ, ನಿತಿನ್ ತಿಮ್ಮಯ್ಯ, ಮಂದೀಪ್ ಸಿಂಗ್, ಮಲಿಕ್ ಸಿಂಗ್, ಎಸ್. ವಿ ಸುನಿಲ್, ಚಿಂಗಲೆನ್ಸಾನ್ ಸಿಂಗ್ ಕಂಗುಜಾಮ್, ಧರ್ಮವೀರ ಸಿಂಗ್, ಗುರ್ವಿಂದರ್ ಸಿಂಗ್ ಚಾಂಡಿ.
ಹೆಚ್ಚುವರಿ ಆಟಗಾರರು: ಸುಶಾಂತ್ ಟಿರ್ಕೆ, ಸಂದೀಪ್ ಸಿಂಗ್, ಎಂ.ಬಿ ಅಯ್ಯಪ್ಪ, ಗುರ್ಮೈಲ್ ಸಿಂಗ್, ಆಕಾಶ್ ಸಿಂಗ್, ಇಮ್ರಾನ್ ಖಾನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!