ನವದೆಹಲಿ: ಏಪ್ರಿಲ್ನಲ್ಲಿ ಇಂಡೋನೇಷ್ಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಗಳಿವೆ. ರಾಜ್ಯ ಟೆನಿಸ್ ಅಸೋಸಿಯೇಷನ್ ಆತಿಥ್ಯ ವಹಿಸಲು ಮುಂದಾಗಿರುವುದು ತಿಳಿದು ಬಂದಿದೆ.
'ಏಪ್ರಿಲ್ನಲ್ಲಿ ಇಂಡೋನೇಷ್ಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯಾವಳಿ ಆತಿಥ್ಯ ವಹಿಸಲು ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ ಕೇಳಿಕೊಂಡಿದೆ. ಅದು ಮಧ್ಯಮ ವೇಗದ ಬೌನ್ಸಿ ಕೋರ್ಟ್ ಆಗಿದೆ. ಈ ಕುರಿತು ನಾವು ಆಟಗಾರರನ್ನು ಕೇಳಿದ್ದೇವೆ. ಅವರು ಈ ಬಗ್ಗೆ ಒಪ್ಪಿಕೊಂಡರೆ, ನಾವು ಅಲ್ಲಿ ಪಂದ್ಯ ನಡೆಸಲು ಸಿದ್ಧರಿದ್ದೇವೆ' ಎಂದು ಎಐಟಿಎ ಮುಖ್ಯ ಕಾರ್ಯನಿರ್ವಾಹಕ ಹಿರ್ನಾಮಾಯ್ ಚಟರ್ಜಿ ಅವರು ಹೇಳಿದ್ದಾರೆ.
ಮುಂದಿನ ಪ್ರಕ್ರಿಯೆಗಾಗಿ ಸೋಮ್ದೇವ್ ಅವರೊಂದಿಗೆ ನಾವು ಈ ಮೇಲ್ ಮೂಲಕ ಸಂಪರ್ಕದಲ್ಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.