ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹೊಸ ಬೇಡಿಕೆ ತಿರಸ್ಕರಿಸಿದ ಎಐಟಿಎ

ಬಂಡಾಯವೆದ್ದಿರುವ ಟೆನಿಸ್ ಆಟಗಾರರ ಹೊಸ ಬೇಡಿಕೆಗಳನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಗುರುವಾರ ಸಾರಾಸಗಟಾಗಿ...

Rashmi Kasaragodu
Updated On : 7 Feb 2013, 10:08 am

ನವದೆಹಲಿ: ಬಂಡಾಯವೆದ್ದಿರುವ ಟೆನಿಸ್ ಆಟಗಾರರ ಹೊಸ ಬೇಡಿಕೆಗಳನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಗುರುವಾರ ಸಾರಾಸಗಟಾಗಿ ತಿರಸ್ಕರಿಸಿದೆ. ಆಟಗಾರರನ್ನು ಆಡಳಿತ ಮಂಡಳಿ ಅಥವಾ ಆಯ್ಕೆ ಸಮಿತಿಯಲ್ಲಿ ಸೇರಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ, ಅವರು ಚುನಾವಣೆಯ ಮೂಲಕ ರಾಷ್ಟ್ರೀಯ ಫೆಡರೇಷನ್ ಸೇರಿದರೆ ಮಾತ್ರ ಇದು ಸಾಧ್ಯ ಎಂದು ಹೇಳಿದೆ.
ಆಟಗಾರರು ಬಂಡಾಯವೆದ್ದಿರುವ ಬಿಕ್ಕಟ್ಟನ್ನು ಬಗೆಹರಿಸಲು, ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಒಂದು ವೇಳೆ ಆಟಗಾರರು ತಾವೇ ಲಭ್ಯರಾದರೆ ಮಾತ್ರ, ಮುಂಬರುವ ಪಂದ್ಯಾವಳಿಗಳಿಗೆ ಅವರನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.
ರಾಷ್ಟ್ರೀಯ ಫೆಡರೇಷನ್ನ ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿಯಲ್ಲಿ ಶೇ. 50ರಷ್ಟು ಆಟಗಾರರನ್ನು ಸೇರಿಸಿಕೊಳ್ಳಬೇಕು ಎಂಬ ಹೊಸ ಬೇಡಿಕೆಯನ್ನು, ಬಂಡಾಯವೆದ್ದಿರುವ ಆಟಗಾರರ ನಾಯಕತ್ವ ವಹಿಸಿರುವ ಸೋಮ್ದೇವ್ ದೇವ್ವರ್ಮನ್ ಸಂಸ್ಥೆ ಮುಂದಿಟ್ಟಿದ್ದಾರೆ.
ಡೇವಿಸ್ ಕಪ್ ಬಹುಮಾನದ ಮೊತ್ತದಲ್ಲಿ ಷೇರುಗಳನ್ನು ಹೆಚ್ಚಿಸಲು, ಬಿಸಿನೆಸ್ ದರ್ಜೆಯ ವಿಮಾನ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು, ತಂಡದ ಸಹ ಸಿಬ್ಬಂದಿಯಲ್ಲಿ ಬದಲಾವಣೆ ಮಾಡಲು ಹಾಗೂ ತವರಿನ ಪಂದ್ಯಾವಳಿಗೆ ಸ್ಥಳ ಆಯ್ಕೆ ಮಾಡಲು, ಈ ಮುನ್ನ ಆಟಗಾರರು ಇಟ್ಟಿದ್ದ ಬೇಡಿಕೆಗಳ ಕುರಿತು ಆಟಗಾರರನ್ನು ಸಂಪರ್ಕಿಸಲು ಎಐಟಿಎ ಸಿದ್ಧವಾಗಿತ್ತು.
'ಆಟಗಾರರು ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಲು ನಾವು ಈ ಮುನ್ನ ಒಪ್ಪಿಕೊಂಡಿದ್ದೆವು. ಕೆಲವು ಜನರು ಹೊರಗಿನಿಂದ ರಾಜಕೀಯ ಮಾಡುತ್ತಿದ್ದಾರೆ. ಇದು ಹಲವಾರು ಟೆನಿಸ್ ತಾರೆಗಳ ವೃತ್ತಿಜೀವನಕ್ಕೆ ಧಕ್ಕೆಯನ್ನು ಉಂಟುಮಾಡಿದೆ' ಎಂದು ಎಐಟಿಎ ಮುಖ್ಯ ಕಾರ್ಯನಿರ್ವಾಹಕ ಹಿರ್ನಾಮಾಯ್ ಚಟರ್ಜಿ ಅವರು ಹೇಳಿದ್ದಾರೆ.
'ಫೆಡರೇಷನ್ ಹೇಗೆ ರಚಿಸಲಾಗಿದೆ. ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ಆಟಗಾರರಿಗೆ ಸರಿಯಾಗಿ ಗೊತ್ತಿಲ್ಲ. ಆಟಗಾರರು ಒಂದು ವೇಳೆ ಎಐಟಿಎ ಆಡಳಿತ ಮಂಡಳಿಯೊಳಗೆ ಪ್ರವೇಶಿಸಿ, ಬದಲಾವಣೆಗಳನ್ನು ತರಲು ಬಯಸಿದ್ದರೆ, ಅವರು ಮೊದಲು ರಾಜ್ಯ ಟೆನಿಸ್ ಸಂಸ್ಥೆಗಳಿಗೆ ಆಯ್ಕೆಯಾಗಬೇಕು. ನಂತರ ಅವರನ್ನು ರಾಷ್ಟ್ರೀಯ ಫಡೇಷನ್ಗೆ ಆಯ್ಕೆ ಮಾಡಲಾಗುತ್ತದೆ. ಪ್ರಕ್ರಿಯೆ ಹೀಗಿದ್ದಾಗ, ನೇರವಾಗಿ ಆಟಗಾರರನ್ನು ರಾಷ್ಟ್ರೀಯ ಫೆಡರೇಷನ್ಗೆ ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?' ಎಂದು ಅವರು ಪ್ರಶ್ನಿಸಿದ್ದಾರೆ.
'ಇಂತಹ ಬೇಡಿಕೆಗಳನ್ನು ಇಡುವುದು ದೇಶವನ್ನು ಹಣಕ್ಕಾಗಿ ಒತ್ತೆ ಇಟ್ಟುಕೊಂಡಂತೆ.ಯುವ ಆಟಗಾರರು ವೃತ್ತಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ನಾವು ಆಟಗಾರರಿಗೆ ಫೇಡರೇಷನ್ನಲ್ಲಿ ಸ್ಥಾನ ನೀಡಲು ಆಸಕ್ತಿ ಮುಂದಾದರೂ, ನಿಯಮದ ಪ್ರಕಾರ ಸಾಧ್ಯವಿಲ್ಲದ ಮಾತು' ಎಂದಿದ್ದಾರೆ ಚಟರ್ಜಿ.
'ಐಒಸಿ ನಿಯಮಾವಳಿ ಮತ್ತು ಕ್ರೀಡಾ ಸಂಹಿತೆ ಹಾಗೂ ಐಟಿಎಫ್ ಮತ್ತು ಎಐಟಿಎ ಸಂವಿಧಾನದವನ್ನು ನಾವು ಅನುಸರಿಸುತ್ತಿದ್ದೇವೆ. ಈ ಆಧಾರದ ಮೇಲೆ ಆಟಗಾರರನ್ನು ನೇರವಾಗಿ ರಾಷ್ಟ್ರೀಯ ಫೆಡರೇಷನ್ಗೆ ಸೇರಿಸಿಕೊಳ್ಳುವಂತಿಲ್ಲ.'

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement