ಡ್ರಾಗೆ ಆನಂದಪಟ್ಟ ವಿಶ್ವನಾಥನ್
ಟಾಟಾ ಸ್ಟೀಲ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಮೂರನೇ ಸ್ಥಾನಗಳಿಸಿದ್ದ ಆನಂದ್...
ಬಡೆನ್-ಬಡೆನ್: ಟಾಟಾ ಸ್ಟೀಲ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಮೂರನೇ ಸ್ಥಾನಗಳಿಸಿದ್ದ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ ಗ್ರೆಂಕ್ ಕ್ಲಾಸಿಕ್ ಓಪನರ್ ಚೆಸ್ ಚಾಂಪಿಯನ್ಷಿಪ್ನ ಮೊದಲ ಸುತ್ತಿನ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಇಂಗ್ಲೆಂಡ್ನ ಮೈಕಲ್ ಆ್ಯಡಮ್ಸ್ ವಿರುದ್ಧದ ಪಂದ್ಯದಲ್ಲಿ ಆನಂದ್ ಡ್ರಾ ಸಾಧಿಸಿದರು.
ಇತ್ತ ಪಂದ್ಯಾವಳಿಯ ಮತ್ತೋರ್ವ ಪ್ರಮುಖ ಆಟಗಾರ ಇಟಲಿಯ ಫ್ಯಾಬಿಯಾನೊ ಕರೌನಾ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಜಯಗಳಿಸುವ ಮೂಲಕ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸಿದ್ದಾರೆ.
ತಮ್ಮ ಎದುರಾಳಿ ಜರ್ಮನಿಯ ಜಾರ್ಜ್ ಮೈರ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಕರೌನಾ ಸುಲಭದ ಜಯ ಸಾಧಿಸಿದರು.
ಈ ಮೂಲಕ ಕರೌನಾ ಆರು ಆಟಗಾರರ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಒಂದು ಅಂಕಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಅರ್ಧ ಅಂಕಗಳನ್ನು ಗಳಿಸಿರುವ ಆನಂದ್, ಆ್ಯಡಮ್ಸ್, ಫ್ರೈಡ್ಮ್ಯಾನ್ ಮತ್ತು ನೈಡಿಸ್ಕ್ ಇದ್ದಾರೆ.
ಇನ್ನು ಮೊದಲ ಸುತ್ತಿನ ಪಂದ್ಯದಲ್ಲಿ ಸೋತ ಜಾರ್ಜ್ ಮೈರ್ ಶೂನ್ಯ ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ.