ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹಾಕಿ ಇಂಡಿಯಾ ಲೀಗ್: ಪ್ರಶಸ್ತಿ ಸುತ್ತಿಗೆ ರೈನೋಸ್, ವೇವ್ ರೈಡರ್ಸ್

Mainashree
Updated On : 10 Feb 2013, 1:01 am

ರಾಂಚಿ: ಡೆಲ್ಲಿ ವೇವ್‌ರೈಡರ್ಸ್ ಹಾಗೂ ರಾಂಚಿ ರೈನೋಸ್ ತಂಡಗಳು ಈ ಬಾರಿಯ ಹಾಕಿ ಇಂಡಿಯಾ ಲೀಗ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿವೆ.
ರಾಂಚಿಗೆ ಜಯ: ಸಂಜೆ ನಡೆದ ಮೊದಲ ಸೆಮಿಫೈನಲ್ ಪಂದ್ಯ ರಾಂಚಿ ರೈನೋಸ್ ಹಾಗೂ ಉತ್ತರ ಪ್ರದೇಶ ವಿಝಾರ್ಡ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮಿಂಚಿದ ರಾಂಚಿ ರೈನೋಸ್ ತಂಡದ ಆಟಗಾರರಾದ ಮನದೀಪ್ ಸಿಂಗ್ (5ನೇ ನಿಮಿಷ, 66ನೇ ನಿಮಿಷ) ಹಾಗೂ ನಿಕ್ ವಿಲ್ಸನ್ (32ನೇ ನಿಮಿಷ, 64ನೇ ನಿಮಿಷ) ಇಬ್ಬರೂ ತಲಾ ಎರಡು ಗೋಲು ಗಳಿಸಿ ತಮ್ಮ ತಂಡದ ಗೆಲುವನು ಸುಲಭಗೊಳಿಸಿದರು. ಉತ್ತರ ಪ್ರದೇಶ ತಂಡದ ಪರವಾಗಿ, ನಿತಿನ್ ತಿಮ್ಮಯ್ಯ (16ನೇ ನಿಮಿಷ, 54ನೇ ನಿಮಿಷ) ಗೋಲು ಗಳಿಸಿದರು. ಅಂತಿಮವಾಗಿ, ರಾಂಚಿ ತಂಡ 4-2 ಅಂತರದಲ್ಲಿ ಗೆಲುವು ಸಾಧಿಸಿ, ಫೈನಲ್‌ಗೆ ಲಗ್ಗೆಯಿಟ್ಟಿತು.
ಡೆಲ್ಲಿಗೆ ಜಯ: ರಾತ್ರಿ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡ, ಪಂಜಾಬ್ ತಂಡದ ವಿರುದ್ಧ 3-1 ಅಂತರದ ಗೆಲುವು ದಾಖಲಿಸಿತು.
ಡೆಲ್ಲಿ ಪರವಾಗಿ, ಆ್ಯಂಡ್ರಿಸ್ ಮಿರ್‌ಬೆಲ್ (14ನೇ ನಿಮಿಷ), ರೂಪಿಂದರ್ ಸಿಂಗ್ ಪಾಲ್ (32 ನಿಮಿಷ) ಹಾಗೂ ಲಾಯ್ಡ್ ನೋರಿಸ್ ಜೋನ್ಸ್ (67ನೇ ನಿಮಿಷ) ಗೋಲು ಗಳಿಸಿದರೆ, ಪಂಜಾಬ್ ಪರವಾಗಿ ಜ್ಯಾಮಿ ಡ್ವೇರ್ 33ನೇ  ನಿಮಿಷದಲ್ಲಿ ಗೋಲು ಗಳಿಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement