ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಎ' ತಂಡಕ್ಕೆ ಗಂಭೀರ್ ಸಾರಥ್ಯ

Mainashree
Updated On : 10 Feb 2013, 11:23 am

ಮುಂಬೈ: ಆಸೀಸ್ ವಿರುದ್ಧದ ಮೊದಲೆರಡು ಟೆಸ್ಟ್‌ಗಳಿಗಾಗಿ ಪ್ರಕಟಗೊಂಡಿರುವ ಭಾರತ ತಂಡದಲ್ಲಿ ಅವಕಾಶ ಪಡೆಯದ ಗೌತಮ್ ಗಂಭೀರ್ ಅವರಿಗೆ  ಭಾರತ 'ಎ' ತಂಡದ ಸಾರಥ್ಯ ನೀಡಲಾಗಿದೆ. ಫಾರ್ಮ್ ಇಲ್ಲದೇ ಬಳಲುತ್ತಿದ್ದ ಗಂಭೀರ್ ಅವರನ್ನು ಟೀಂ ಇಂಡಿಯಾದಿಂದ ಕೈಬಿಟ್ಟಿರುವ ಬಿಸಿಸಿಐ ಆಯ್ಕೆ ಮಂಡಳಿ, ಅವರಿಗೆ ಈ ಹೊಸ ಜವಾಬ್ದಾರಿ ನೀಡಿದೆ. ಭಾರತ 'ಎ' ತಂಡದ ನಾಯಕರಾಗಿದ್ದ ಶಿಖರ್ ಧವನ್ ಅವರು ಆಸೀಸ್ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಗಂಭೀರ್ ಆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
2010ರ ಜನವರಿಯಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದ ಅವರು ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಶತಕ ಗಳಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement