ಕ್ರೀಡೆ

ಇಂದಿನಿಂದ ಆಸೀಸ್ ಸಮರಾಭ್ಯಾಸ

ಚೆನ್ನೈ: ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಆಗಮಿಸಿರುವ ಆಸೀಸ್ ತಂಡ, ತನ್ನ ಸಮರಾಭ್ಯಾಸವನ್ನು ಮಂಗಳವಾರದಿಂದ ಅಧಿಕೃತವಾಗಿ ಆರಂಭಿಸಲಿದೆ. ಈ ನಿಟ್ಟಿನಲ್ಲಿ ಮೊದಲ ಅಭ್ಯಾಸ ಪಂದ್ಯ ಬಿಸಿಸಿಐ ಅಧ್ಯಕ್ಷರ ಇಲೆವೆನ್ ವಿರುದ್ಧ ಮಂಗಳವಾರ ಆರಂಭವಾಗಲಿದೆ. ಈ ಅಭ್ಯಾಸ ಪಂದ್ಯದಲ್ಲಿ ಆಸೀಸ್ ತಂಡವನ್ನು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಅವರು ಮುನ್ನಡೆಸಲಿದ್ದಾರೆ.
ಅಭ್ಯಾಸ ಪಂದ್ಯಗಳ ಹಿನ್ನೆಲೆಯಲ್ಲಿ, ಆಸೀಸ್ ತಂಡ ತನ್ನ ಮೊದಲ ಪಂದ್ಯವನ್ನು ಅಧ್ಯಕ್ಷರ ಇಲೆವೆನ್ ತಂಡದೆದುರು ಆಡಲಿದೆ. ಎರಡು ದಿನಗಳವರೆಗೆ ನಡೆಯಲಿರುವ ಈ ಪಂದ್ಯ ಚೆನ್ನೈನಲ್ಲಿ ಫೆ. 12ರಿಂದ ಆರಂಭವಾಗಲಿದೆ.
ಆಸೀಸ್ ತಂಡದಲ್ಲಿ ಆಲ್ರೌಂಡರ್ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೋಯಿಸ್ ಹೆನ್ರಿಕ್ಯೂಸ್ ಅವರೂ ಆಡಲಿದ್ದಾರೆ.
ಈ ಪಂದ್ಯಗಳಲ್ಲಿನ ಪ್ರದರ್ಶನ ಆಧರಿಸಿ, ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಆಸೀಸ್ ತಂಡದಲ್ಲಿ ಆಡಲಿರುವ ಆಟಗಾರರ ಬಗ್ಗೆ ನಿರ್ಧಾರ ಕೈಗೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ಚಿಂತನೆ ನಡೆಸಿದೆ. ಹೆನ್ರಿಕ್ಯೂಸ್ ಹಾಗೂ ಮ್ಯಾಕ್ಸ್‌ವೆಲ್ ಇಬ್ಬರೂ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಈವರೆಗೆ ಆಡಿಲ್ಲ. ಹಾಗಾಗಿ, ಅಧ್ಯಕ್ಷರ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯ ಅವರಿಗೆ ಒಂದು ರೀತಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶವಾಗಿದೆ. ಇನ್ನು, ಆಸೀಸ್ ತಂಡದಲ್ಲಿ ಸ್ಪಿನ್ನರ್ ಆಸ್ಟನ್ ಆ್ಯಗರ್ ಸಹಾ ಆಡಲಿದ್ದಾರೆ.
ಅಧ್ಯಕ್ಷರ ಇಲೆವೆನ್‌ನ ಬಲ: ಇನ್ನು, ಭಾರತದ ಪಾಳಯದಲ್ಲಿ ಅಭಿನವ್ ಮುಕುಂದ್ ಆರಂಭಿಕ ಆಟಗಾರರಾಗಿರುವುದಲ್ಲದೇ, ಅವರೇ ತಂಡದ ಸಾರಥ್ಯವನ್ನೂ ವಹಿಸಿಕೊಂಡಿದ್ದಾರೆ. ಅವರ ಜೊತೆಗೆ ಆಂಬಟಿ ರಾಯುಡು, ಮನದೀಪ್ ಸಿಂಗ್, ಆಲ್ರೌಂಡರ್ ಪರ್ವೀಜ್ ರಸೂಲ್ ಹಾಗೂ ಹೊಸ ವೇಗಿ ಶಮಿ ಅಹ್ಮದ್ ಇದ್ದಾರೆ. ಇತ್ತೀಚೆಗೆ ಇರಾನಿ ಟ್ರೋಫಿಯಲ್ಲಿ ಶತಕ ಗಳಿಸಿರುವ ರಾಯುಡು ಉತ್ತಮ ಫಾರ್ಮ್‌ನಲ್ಲಿದ್ದು, ಅವರು ಆಸೀಸ್‌ನ ವೇಗಿಗಳಾದ ಜೇಮ್ಸ್ ಪ್ಯಾಟಿನ್ಸನ್, ಪೀಟರ್ ಸಿಡ್ಲ್ ಅವರಿಗೆ ಸವಾಲಾಗಿ  ನಿಲ್ಲಬಹುದು.


ಅಧ್ಯಕ್ಷರ ಇಲೆವೆನ್


ಅಭಿನವ್ ಮುಕುಂದ್ (ನಾಯಕ), ರಾಬಿನ್ ಉತ್ತಪ್ಪ, ಆಂಬಟಿ ರಾಯುಡು, ಮನದೀಪ್ ಸಿಂಗ್, ಕೇದಾರ್ ಜಾಧವ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಸರಾಬ್ಜಿತ್ ಲಡ್ಡಾ, ಪರ್ವೇಜ್ ರಸೂಲ್, ಶಮಿ ಅಹ್ಮದ್, ಪರ್ವಿಂದರ್ ಆವಾನಾ, ಕಮ್ಲೇಶ್ ಮಾಕ್ವಾನಾ.



ಆಸ್ಟ್ರೇಲಿಯಾ



ಮ್ಯಾಥ್ಯೂ ವೇಡ್ (ನಾಯಕ), ಎಡ್ವರ್ಡ್ ಕೋವನ್, ಉಸ್ಮಾನ್ ಖವಾಜಾ, ಗ್ಲೆನ್ ಮ್ಯಾಕ್ಸ್‌ವೆಲ್, ಮೋಯ್ಸೆಸ್ ಹೆನ್ರಿಕ್ಯೂಸ್, ಸ್ಟೀವ್ ಸ್ಮಿತ್, ಪೀಟರ್ ಸಿಡ್ಲ್, ಜೇಮ್ಸ್ ಪ್ಯಾಟಿಸನ್, ನಥಾನ್ ಲಿಯೋನ್, ಜ್ಯಾಕ್ಸನ್ ಬರ್ಡ್, ಆ್ಯಸ್ಟನ್ ಆ್ಯಗರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!