ಇಂದಿನಿಂದ ರಾಷ್ಟ್ರೀಯ ಆರ್ಚರಿ
ಹೈದರಾಬಾದ್: ಇಂದಿನಿಂದ 35ನೇ ಜೂನಿಯರ್ ರಾಷ್ಟ್ರೀಯ ಆರ್ಚರಿ ಚಾಂಪಿಯನ್ಷಿಪ್ ಆರಂಭವಾಗಲಿದ್ದು, ಈ ಪಂದ್ಯಾವಳಿಯಲ್ಲಿ 25 ರಾಜ್ಯಗಳಿಂದ 400ಕ್ಕೂ ಹೆಚ್ಚು ಆರ್ಚರಿ ಪಟುಗಳು ಭಾಗವಹಿಸಲಿದ್ದಾರೆ.
ಈ ಚಾಂಪಿಯನ್ಷಿಪ್ನಲ್ಲಿ ರಾಷ್ಟ್ರೀಯ ಚಾಂಪಿಯನ್ಗಳು ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತ ಆರ್ಚರಿ ಪಟುಗಳಾದ ಆಂಧ್ರ ಪ್ರದೇಶದ ರಿತುಲ್ ಚಟರ್ಜಿ, ಜ್ಯೋತಿ ಸುರೇಖಾ ಮತ್ತು ಸಿ.ಎಚ್. ಜಿಗ್ನಾಸ್ ಭಾಗವಹಿಸಲಿದ್ದು, ಪಂದ್ಯಾವಳಿಗೆ ಹೆಚ್ಚು ಆಕರ್ಷಣೆ ನೀಡಲಿದೆ.
ಸ್ಫೋಟ್ಸ್ ಅಥಾರಿಟಿ ಆಫ್ ಆಂಧ್ರ ಪ್ರದೇಶ ಕಾಂಪ್ಲೆಕ್ಸ್ನಲ್ಲಿ ನಡೆಯಲಿರುವ ಈ ಪಂದ್ಯಾವಳಿ 10 ದಿನಗಳ ಕಾಲ ನಡೆಯಲಿದೆ.