ಟಿ3 2ನೇ ಆವೃತ್ತಿ 16 ರಿಂದ ಆರಂಭ
ಬೆಂಗಳೂರು: ಕಮ್ಯೂನ್ ಟಿ3 ಟೀಂ ಟೆನಿಸ್ ತನ್ನ ಎರಡನೇ ಆವೃತ್ತಿಯ ದಿನಾಂಕವನ್ನು ನಿಗಧಿಪಡಿಸಿದ್ದು, ಫೆ.16 ಹಾಗೂ 17 ರಂದು ನಡೆಯಲಿದೆ. ಈ ಪಂದ್ಯಾವಳಿಯು ಕ್ರಿಕೆಟ್‌ನಲ್ಲಿ ಟಿ20 ಮಾದರಿಯ ಚುಟುಕು ಕ್ರೀಡೆಯ ರೀತಿಯದಾಗಿದ್ದು, ಎಲ್ಲಾ ವಯಸ್ಸಿನ ಟೆನಿಸ್ ಆಟಗಾರರನ್ನು ಒಂದೆಡೆಗೆ ತುವ ಪ್ರಯತ್ನ ಇದಾಗಿದೆ. ಕಮ್ಯೂನ್ ಟಿ3 ಟೀಂ ಟೆನಿಸ್ ಪಂದ್ಯಾವಳಿಯು ದೇಶದ ಎಲ್ಲಾ ಕ್ಲಬ್ ಹಾಗೂ ಟೆನಿಸ್ ಅಕಾಡೆಮಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದ್ದು, 3 ಸೂಪರ್ ಟೈ ಬ್ರೇರ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಪಂದ್ಯಾವಳಿಯ 35 ವರ್ಷದ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟವರ ಡಬಲ್ಸ್ ಮುಕ್ತ ವಿಭಾಗದ ಪ್ರವೇಶದಲ್ಲಿ ಒಂದು ಡಬಲ್ಸ್ ತಂಡಗಳು ಭಾಗವಹಿಸಬಹುದಾಗಿದ್ದು, ಯಾವುದೇ ವಯಸ್ಸಿನವರು ಇಲ್ಲಿ ಭಾಗವಹಿಸಬಹುದಾಗಿದೆ. 3ರಲ್ಲಿ 2 ವಿಭಾಗಗಳಲ್ಲಿ ಜಯಗಳಿಸಿದವರು ಟೈ3 ಪ್ರಶಸ್ತಿಯನ್ನುಪಡೆಯಲಿದ್ದಾರೆ.