ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಟೀಂ ಇಂಡಿಯಾ ಅನುಭವಿಗಳ ತಂಡ'

Rashmi Kasaragodu
Updated On : 11 Feb 2013, 11:25 am

ಚೆನೈ: ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ನಿವೃತ್ತಿಯ ಹೊರತಾಗಿಯೂ ಭಾರತ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ತಂಡದಲ್ಲಿ ಈಗಿರುವ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟಗಾರರಾಗಿದ್ದು, ತವರಿನಲ್ಲಿ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಮುಂದಿನ ಹದಿನೈದು ದಿನಗಳ ಕಾಲ ನಾವು ಸಾಕಷ್ಟು ಪರಿಶ್ರಮದಿಂದ ತಯಾರಿ ನಡೆಸಬೇಕಿದ್ದು, ಮೊದಲ ಪಂದ್ಯಕ್ಕೆ ಉತ್ತಮ ತಯಾರಿ ಅಗತ್ಯವಿದೆ ಎಂದು ವೇಡ್ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ನೋಡಿದ್ದೇವೆ. ಅದರಲ್ಲೂ ಕೊನೆಯ ಪಂದ್ಯದಲ್ಲಿ ವೇಗಿಗಳು ಹೆಚ್ಚಿನ ವಿಕೆಟ್ ಪಡೆದಿದ್ದಾರೆ. ನಮ್ಮ ತಂಡದಲ್ಲಿ ಉತ್ತಮ ವೇಗದ ಬೌಲರ್‌ಗಳಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಅವರು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement