ಅಂತಾರಾಜ್ಯ ಕಬಡ್ಡಿ ಪಂದ್ಯಾವಳಿಗೆ ತೆರೆ
ಹುಣಸಗಿ: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಹೊನಲು ಬೆಳಕಿನ ಅಂತಾರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿ ರೋಚಕ ಆಟದೊಂದಿಗೆ ಮುಕ್ತಾಯವಾಯಿತು.
ಮಹಾರಾಷ್ಟ್ರದ ನಾಸಿಕ್ ಆರ್ಮಿ ತಂಡ ಮತ್ತು ಕರ್ನಾಟಕ ಆರ್ಡಬ್ಲ್ಯೂಎಫ್ ಬೆಂಗಳೂರು ತಂಡದ ನಡುವೆ ಭಾರಿ ಪೈಪೋಟಿ ನಡೆದು, ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತು. ಕೊನೆಗೂ ನಾಸಿಕ್ ತಂಡ ಪ್ರಥಮ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು.
ಬೆಂಗಳೂರು ತಂಡ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಹೂಡಿ ತಂಡ (ಬೆಂಗಳೂರು) ಮತ್ತು ಭೂಮಿಕಾ ಬೆಂಗಳೂರು ತಂಡ ಹಂಚಿಕೊಂಡಿವೆ.
ಅದೇ ರೀತಿ ಮಹಿಳೆಯರ ವಿಭಾಗದಲ್ಲಿ ಪ್ರಥಮ ಮತ್ತು ದ್ವೀತಿಯ ಬಹುಮಾನಗಳು ಮಹಾರಾಷ್ಟ್ರ ಪಾಲಾಗಿವೆ. ದೀನಾ ಬ್ಯಾಂಕ್ ಮುಂಬೈ ತಂಡ ಪ್ರಥಮ ಬಹುಮಾನ ಪಡೆದರೆ, ಶಿವೇ ತಂಡ ಪುಣೆ ದ್ವಿತೀಯ ಬಹುಮಾನ ಪಡೆಯಿತು. ತೃತೀಯ ಬಹುಮಾನವನ್ನು ಬೆಂಗಳೂರು ಸಿಟಿ ಮತ್ತು ರೇಲ್ವೆ ಕ್ಯಾಪ್ಸ್ ಮುಂಬೈ ತಂಡ ಪಡೆದುಕೊಂಡಿವೆ.