ಅಟಪಟ್ಟು, ವಾಸ್ಗೆ ಕೋಚ್ ಜವಾಬ್ದಾರಿ
ಕೊಲಂಬೊ: ಶ್ರೀಲಂಕಾ ತಂಡದ ಆಡಳಿತ ವಿಭಾಗದಲ್ಲಿ ಪ್ರಮುಖ ಬದಲಾವಣೆಯನ್ನು ತರಲಾಗಿದ್ದು, ಶ್ರೀಲಂಕಾದ ಪ್ರಮುಖ ಆಟಗಾರರಾದ ಮರ್ವಾನ್ ಅಟಪಟ್ಟು ಹಾಗೂ ಚಮಿಂದಾ ವಾಸ್ ಅವರಿಗೆ ಶ್ರೀಲಂಕಾ ತಂಡದಲ್ಲಿ ಕ್ರಮವಾಗಿ ಸಹಾಯಕ ಕೋಚ್ ಹಾಗೂ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ನೀಡಲಾಗಿದೆ. ಅಟಪಟ್ಟು ಶ್ರೀಲಂಕಾ ತಂಡದ ಮಾಜಿ ನಾಯಕನಾಗಿದ್ದು ಇವರಿಗೆ ತಂಡದಲ್ಲಿ ಸಹಾಯಕ ಕೋಚ್ ಸ್ಥಾನ ನೇಮಿಸಲಾಗಿದ್ದು, ಮಾ.1ರಿಂದ ತಂಡದ ಮುಖ್ಯ ಕೋಚ್ ಆಗಿರುವ ಗ್ರಾಹಮ್ ಫೊರ್ಡ್ ಅವರಿಗೆ ಸಹಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ನ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ಮೈಕಲ್ ಡಿ ಜ್ಯೋಸಾ ಅವರನ್ನು ಸೋಮವಾರ ತಂಡದ ಹೊಸ ಮ್ಯಾನೇಜರ್ ಆಗಿ ಆಯ್ಕೆ ಮಾಡಲಾಗಿದೆ.