ಚೆಸ್: ಕೊನೆಗೂ ಗೆದ್ದ ಆನಂದ್
ಬಡೆನ್ ಬಡೆನ್: ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ತಮ್ಮ ಡ್ರಾ ಫಲಿತಾಂಶದ ಸರಪಳಿಯನ್ನು ಮುರಿದಿದ್ದು, ಇಲ್ಲಿ ನಡೆಯುತ್ತಿರುವ ಗ್ರೆಂಕ್ ಚೆಸ್ ಕ್ಲಾಸಿಕ್ ಚಾಂಪಿಯನ್ಷಿಪ್ನ ಐದನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಜರ್ಮನಿಯ ಅರ್ಕಾಡಿಜ್ ನಾಡಿಸ್ಕ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಆನಂದ್ ಗೆಲುವಿನ ಹಾದಿಗೆ ಮರಳಿದ್ದಾರೆ. ಪಂದ್ಯಾವಳಿಯ ಮೊದಲ ನಾಲ್ಕು ಸುತ್ತುಗಳಲ್ಲಿ ಸತತವಾಗಿ ಡ್ರಾ ಕಾಣುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ ಆನಂದ್, ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಾರೆ.