ಜಗಜ್ಜಟ್ಟಿ ಹ್ಯಾಮಿಲ್ಟನ್!
ಫಾರ್ಮುಲಾ ಒನ್ ರೇಸಿಂಗ್‌ನ ಸೆನ್ಸೇಷನ್ ಲಿವೀಸ್ ಹ್ಯಾಮಿಲ್ಟನ್, ಹೊಸ ಜೆಟ್ ವಿಮಾನವೊಂದನ್ನು ಖರೀದಿಸಿದ್ದಾನಂತೆ. ಅದರ ಬೆಲೆ ಬರೋಬ್ಬರಿ 20 ದಶಲಕ್ಷ ಪೌಂಡ್ಸ್! ಲಿವೀಸ್ ಹ್ಯಾಮಿಲ್ಟನ್ ಈ ಜೆಟ್ ಖರೀದಿಸಿರೋದು ತನ್ನ ಪ್ರೇಯಸಿಗಾಗಿ. ಆಕೆ ಇರೋದು ಲಾಸ್‌ಏಂಜಲೀಸ್‌ನಲ್ಲಿ. ಈತ ಇರೋದು ಮೊನಾಕೋದಲ್ಲಿ. ಇವರಿಬ್ಬರ ನಡುವಿನ ಮೈಲುಗಟ್ಟಲೆ ದೂರವನ್ನು 'ಜಟಾಪಟ್' ಅಂತ ಕ್ರಮಿಸಲು ಈ ಜೆಟ್ ಖರೀದಿ ನಡೆದಿದೆ.
ಗಂಟೆಗೆ 500 ಕಿ.ಮೀ. ಚಲಿಸೋ ಬೊಂಬಾರ್ಡಿಯರ್ ಸಿಎಲ್-600 ಕಾರು ಕೊಂಡಿದ್ದರೂ, ಪ್ರೇಯಸಿಯನ್ನು ಬೇಗನೇ ನೋಡುವ ಕಾತುರದ ಕಾರಣ ಜಗ'ಜೆಟ್ಟಿ'ಗನಾಗಿದ್ದಾನೆ ಹ್ಯಾಮಿಲ್ಟನ್.
ಟೆರ್ರಿ ಸ್ಫೂರ್ತಿ
ಫುಟ್ಬಾಲಿಗ ಜಾನ್ ಪಾಲಿಗೆ ಆಕೆಯ ಪತ್ನಿ ಚಿಯರ್‌ಗರ್ಲ್ ಆಗಿದ್ದಾಳಂತೆ. ಇತ್ತೀಚೆಗೆ, ಆತ ಭಾಗವಹಿಸಿದ್ದ ಎರಡೂ ಸರಣಿಗಳಲ್ಲಿ ಆತನ ತಂಡ ಸೋಲು ಕಂಡಿತ್ತಂತೆ. ಇದರಿಂದ ಬೇಜಾರಾಗಿದ್ದ ಜಾನ್, ಊಟ, ತಿಂಡಿ, ನಿದ್ರೆ ಸರಿಯಾಗಿ ಮಾಡದೇ ಚಿಂತೆ ಮಾಡ್ತಾ ಕುಳಿತಿರುತ್ತಿದ್ದನಂತೆ. ಇದನ್ನು ಗಮನಿಸಿದ ಟೆರ್ರಿ, ತನ್ನ ಸಂಪಾದನೆಯಲ್ಲಿ ಕೂಡಿಟ್ಟಿದ್ದ ಹಣ ಖರ್ಚು ಮಾಡಿ, ಗಂಡನನ್ನು ಪ್ರವಾಸಕ್ಕೆ ಕರ್ಕೊಂಡು ಹೋಗಿದ್ಲಂತೆ. ಅಲ್ಲಿ, ಇಲ್ಲಿ ಸುತ್ತಾಡಿಸಿ, ಅವನಿಗೆ ಬೇಕಾದ ಬಟ್ಟೆ, ಬರೆ ಕೊಡಿಸಿ, ಖುಷಿಪಡಿಸಿದಳಂತೆ. ಇದರಿಂದ ಮತ್ತೆ ಸಹಜತೆಗೆ ಮರಳಿದ ಜಾನ್ 'ಟೆರ್ರಿ ನನ್ನ ಪಾಲಿನ ಸ್ಫೂರ್ತಿ, ಚಿಯರ್‌ಗರ್ಲ್' ಅಂತ ಆಪ್ತರ ಬಳಿ ಹೇಳಿದ್ದಾನಂತೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.