ಟೆಸ್ಟ್ ಸರಣಿ ಪ್ರಸಾರದಿಂದ ಹಿಂದೆ
ಸಿಡ್ನಿ: ಪ್ರಸಾರದ ಹಕ್ಕು ಪಡೆಯಲು ಬಿಸಿಸಿಐ ನಿಗಧಿಪಡಿಸಿರುವ ಶುಲ್ಕದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಪಬ್ಲಿಕ್ ಬ್ರಾಡ್ಕಾಸ್ಟರ್, ಫೆ.22ರಿಂದ ಆರಂಭವಾಗಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 4 ಟೆಸ್ಟ್ ಪಂದ್ಯಗಳ ಸರಣಿಯ ಪ್ರಸಾರ ಕೈಬಿಟ್ಟಿದೆ.
ಬಿಸಿಸಿಐ ಈ ಹಿಂದೆ ಆಸ್ಟ್ರೇಲಿಯಾ ತಂಡ ಭಾರತದ ಪ್ರವಾಸ ಕೈಗೊಂಡಿದ್ದಾಗ ನಿಗಧಿ ಪಡಿಸಿದಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಿದೆ ಈಗಾಗಿ ಈ ಪಂದ್ಯಾವಳಿಯ ನೇರ ಪ್ರಸಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಪಂದ್ಯಾವಳಿಯ ಪ್ರಮುಖ ಅಂಶಗಳನ್ನು ಸುದ್ದಿ ಮಾದರಿಯಲ್ಲಿ ಮಾಹಿತಿ ನೀಡಲಾಗುವುದೇ ಹೊರತು ಪ್ರತಿ ಚೆಂಡಿನ ವಿವರಣೆಯನ್ನು ನೀಡಲು ಸಾಧ್ಯವಿಲ್ಲ ಎಂದು ಎಬಿಸಿ ತಿಳಿಸಿದೆ.
ಕಾಮನ್ವೆಲ್ತ್ ಕ್ರಿಡಾಕೂಟದ ವೇಳಾಪಟ್ಟಿಯಿಂದಾಗಿ 2010ರ ಸರಣಿಯನ್ನು ಪ್ರಸಾರ ಮಾಡಲು ಎಬಿಸಿ ಕೈಬಿಟ್ಟಿತ್ತು