35ನೇ ಕಿರಿಯರ ಆರ್ಚರಿಗೆ ಚಾಲನೆ
ಹೈದರಾಬಾದ್: ದೇಶದಾದ್ಯಂತ 25 ರಾಜ್ಯಗಳಿಂದ ಸುಮಾರು 400ಕ್ಕು ಹೆಚ್ಚು ಸ್ಫರ್ಧಿಗಳು ಭಾಗವಹಿಸುತ್ತಿರುವ 35ನೇ ರಾಷ್ಟ್ರೀಯ ಕಿರಿಯರ ಆರ್ಚರಿ ಪಂದ್ಯಾವಳಿಗೆ ಇಲ್ಲಿನ ಗಾಚಿಬೌಲಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಬುಧವಾರ ಚಾಲನೆ ದೊರಕಿದೆ.
ದೇಶದ ಪ್ರಮುಖ ಆರ್ಚರಿ ಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಆಂಧ್ರಪ್ರದೇಶದ ರಿತುಲ್ ಚಟರ್ಜಿ, ಜ್ಯೋತಿ ಸುರೇಖ ಮತ್ತು ಸಿ.ಎಚ್ ಜಿಗ್ನಸ್ ಅವರು ಒಂಬತ್ತು ದಿನಗಳ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಆಂಧ್ರಪ್ರದೇಶದ ಡಿಜಿಪಿವಿ.ದಿನೇಶ್ ರೆಡ್ಡಿ, ಆಂಧ್ರ ಪ್ರದೇಶದ ಪೊಲೀಸರಿಗೆ ಆರ್ಚರಿ ತರಬೇತಿ ನಿಡಲಾಗುವುದು ಎಂದು ತಿಳಿಸಿದರು.