ಟಿ20 ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ
ಗುಲ್ಬರ್ಗ: ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಬಿಕಾಂ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿ ಸಾಗರ ವೀರಣ್ಣ ಕೊರಳ್ಳಿ ಬೆಂಗಳೂರು ಬುಲ್ಸ್ ಕ್ಲಬ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಫೆ.10 ರಿಂದ 17ರ ವರೆಗೆ ನಡೆಯುವ ಕ್ರಾಂತಿ ಸ್ಟಾರ್ ಕ್ರಿಕೆಟ್ ಕ್ಲಬ್ ಹಾಗೂ ಡಿಡಿಸಿಎ ನವದೆಹಲಿ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೇವಲ 8 ತಂಡಗಳು ಪ್ರತಿನಿಧಿಸುತ್ತವೆ. ಈ ಪಂದ್ಯಾವಳಿಯಲ್ಲಿ ಆಡಲು ಆಯ್ಕೆಯಾದ ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಪದಾಧಿಕಾರಿಗಳು, ಪ್ರಾಚಾರ್ಯ, ಸಹದ್ಯೋಗಿಗಳು ಹಾಗೂ ವಿದ್ಯಾರ್ಥಿ ವೃಂದ ಅಭಿನಂದಿಸಿದ್ದಾರೆ.