ಟೇಬಲ್ ಟೆನಿಸ್: ಎನ್ಎಂಪಿಟಿ ಫೈನಲ್ಗೆ
ಮಂಗಳೂರು: ನವಮಂಗಳೂರು ಬಂದರಿನಲ್ಲಿ ನಡೆಯುತ್ತಿರುವ ಟೇಬಲ್ ಟೆನಿಸ್ ಮತ್ತು ಟೆನಿಸ್ ಪಂದ್ಯದ ಬುಧವಾರ ನಡೆದ ಸೆಮಿಫೈನಲ್ನಲ್ಲಿ ಹಿರಿಯರ ವಿಭಾಗದಲ್ಲಿ ಎನ್ಎಂಪಿಟಿ ತಂಡ ಫೈನಲ್ ಪ್ರವೇಶಿಸಿದೆ.
ಹಿರಿಯ ನಾಗರಿಕರ ಡಬಲ್ಸ್ನಲ್ಲಿ ಪಿ.ಎಂ. ಸುಕುಮಾರ್ ಮತ್ತು ಪಿ.ಸಿ.ಚಾಕೋ ತಂಡ ಚೆನ್ನೈ ತಂಡ ವಿರುದ್ಧ 3-0 ಅಂತರದಲ್ಲಿ ಗೆಲವು ಪಡೆಯಿತು. ಹಿರಿಯರ ಸಿಂಗಲ್ಸ್ನಲ್ಲಿ ಗಂಗಾಶಿವ ಕುಡ್ಲ ತಂಡ ಎದುರು ಭುಜಿ ವಿಶಾಖಪಟ್ಟಣ ತಂಡ ಹಾಗೂ ಕುಡ್ಲ ಹರಿ ಪಲ್ಲವಿ ತಂಡ ಎದುರು ಕೆ.ಎಸ್.ಖಾನ್ ತಂಡ ಜಯ ಗಳಿಸಿತು. ಹಿರಿಯರ ಡಬಲ್ಸ್ನಲ್ಲಿ ಎನ್ಎಂಪಿಟಿ ವಿರುದ್ಧ ಜೆಎನ್ಪಿಟಿ, ಕುಡ್ಲ ವಿರುದ್ಧ ವಿಶಾಖಪಟ್ಟಣ ಜಯಿಸಿದೆ.