ಡೆವಿಲ್ಸ್‌ಗೆ ಹೀರೋ ಗುಡ್‌ಬೈ
ಮುಂಬೈ: ಭಾರತದ ದ್ವಿಚಕ್ರ ವಾಹನ ಕಂಪನಿ ಇನ್ನು ಮುಂದೆ ಕ್ರಿಕೆಟ್ ಕ್ರೀಡೆಗೆ ಸಂಬಂಧಿಸಿದ ಪಂದ್ಯಾವಳಿಗೆ ಪ್ರಾಯೋಜಕತ್ವ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ತಂಡಕ್ಕೆ ಪ್ರಯೋಜಕತ್ವ ನೀಡುವುದಿಲ್ಲ. ಹೀಗಾಗಿ ಮುಂಬೈ ತಂಡ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹೊಸ ಆಟಗಾರರ ಜತೆ ಹೊಸ ಪ್ರಾಯೋಜಕರನ್ನು ಹುಡುಕುತ್ತಿದೆ. ಇತ್ತೀಚೆಗೆ ಹಿರೋ ಹಾಕಿ ಇಂಡಿಯಾ ಲೀಗ್ ಪಂದ್ಯಾವಳಿಯಲ್ಲಿ ಶೀಷಿಕೆ ಪ್ರಾಯೋಜಕತ್ವ ನೀಡಿತ್ತು. ನಂತರ ಕಳೆದ ಕೆಲ ದಿನಗಳ ಹಿಂದೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಜತೆ ನಾಲ್ಕು ವರ್ಷಗಳ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿರುವ ಹಿರೋ, ಹಾಕಿ ಕ್ರೀಡೆಯತ್ತ ಒಲವು ತೋರುತ್ತಿದೆ.