ಅಂತಾರಾಷ್ಟ್ರೀಯ ಕರಾಟೆ: ಇಬ್ಬರಿಗೆ ಬಹುಮಾನ
ಶಿವಮೊಗ್ಗ: ಬ್ಯಾಂಕಾಕ್ನಲ್ಲಿ ನಡೆದ ಐದನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಶಿವಮೊಗ್ಗದ ಮೂವರು ಹಾಗೂ ಹಿರಿಯೂರಿನ ಇಬ್ಬರು ಕರಾಟೆ ಪಟುಗಳು ಸ್ಪರ್ಧಿಸಿ ಬಹುಮಾನ ಪಡೆದುಕೊಂಡಿದ್ದಾರೆ.
ವಿಶ್ವ ಕರಾಟೆ ಫೆಡರೇಶನ್, ಏಷನ್ಯನ್ ಕರಾಟೆ ಫೆಡರೇಶನ್, ಫೆಸಿಫಿಕ್ ಕರಾಟೆ ಫೆಡರೇಶನ್ ಸಹಯೋಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕರಾಟೆಪಟುಗಳಾದ ಸನ್ಸೈ ಚಂದ್ರಕಾಂತ್, ಬಸವರಾಜ್, ಡಿ. ಶಿವರಾಮಕೃಷ್ಣ, ಹಿರಿಯೂರಿನ ರಂಗಸ್ವಾಮಿ, ಗೋಕುಲ್ ವಿವಿಧ ವಯೋವಾನದ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಈ ಕ್ರೀಡಾಪಟುಗಳು ಆಗಸ್ಟ್ 29ರಿಂದ 31ರವರೆಗೆ ಜಪಾನ್ನ ಟೋಕಿಯೋದಲ್ಲಿ ನಡೆಯುವ ವಿಶ್ವ ಕಪ್ ಕರಾಟೆ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ಸ್ಪರ್ಧಿಸುತ್ತಿದ್ದಾರೆ.