ಆನಂದ್ ಪಂದ್ಯ ಮತ್ತೆ ಡ್ರಾ
ಬಡೆನ್ ಬಡೆನ್: ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಗ್ರೆಂಕ್ ಕ್ಲಾಸಿಕ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಮತ್ತೇ ಡ್ರಾ ಫಲಿತಾಂಶ ಪಡೆದಿದ್ದಾರೆ. ಆರನೇ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ನ ಗ್ರಾಂಡ್ ಮಾಸ್ಟರ್ ಮೈಕಲ್ ಆ್ಯಡಮ್ಸ್ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ.
ಈ ಮೂಲಕ ಆರು ಪಂದ್ಯಗಳಲ್ಲಿ ಐದು ಡ್ರಾ ಫಲಿತಾಂಶ ಪಡೆದಿರುವ ಆನಂದ್ 3.5 ಅಂಕಗಳನ್ನು ಪಡೆದಿದ್ದು, ಅಂಕಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಜರ್ಮನಿಯ ಆರ್ಕಡಿಜ್ ನಾಡಿಸ್ಕ್ ಅವರು ಈ ಸುತ್ತಿನಲ್ಲಿ ಡೇನಿಯಲ್ ಫ್ರಿಡ್ಮನ್ ಅವರ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ 3.5 ಅಂಕಗಳನ್ನು ಪಡೆದಿದ್ದು, ಆನಂದ್ ಜತೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.