'ಕ್ರೀಡಾ ಸಂಹಿತೆಗೆ ಸಂಸತ್ ಒಪ್ಪಿಗೆ ಪಡೆಯಲಿ'
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ 'ಕ್ರೀಡಾ ನೀತಿಸಂಹಿತೆ' ಮೊದಲು ಸಂಸತ್ನ ಒಪ್ಪಿಗೆಯನ್ನು ಪಡೆಯಬೇಕು ಎಂದು ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ತಿಳಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ದೇಶದಲ್ಲಿನ ಎಲ್ಲಾ ಕ್ರೀಡಾ ಸಂಸ್ಥೆಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವುಗಳ ಮಾತೃಸಂಹಿತೆಯ ನೀತಿ ನಿಯಮಗಳಡಿ ಕೆಲಸ ಮಾಡುತ್ತಿವೆ. ಹಾಗಾಗಿ, ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳನ್ನು ಕ್ರೀಡಾ ನೀತಿ ಸಂಹಿತೆಗೆ ಒಳಪಡಿಸುವ ಪ್ರಯತ್ನವನ್ನು ಕೈಬಿಟ್ಟು, ಕೇಂದ್ರ ಸರ್ಕಾರ ಸಂಹಿತೆಗೆ ಸಂಸತ್ ಒಪ್ಪಿಗೆ ಪಡೆಯಲಿ' ಎಂದು ತಿಳಿಸಿದರು.