ಬಿಡಿಸಿಎಗೆ ಆರಿಫ್ ಅಕೀಲ್ ಅಧ್ಯಕ್ಷ
ಬೋಪಾಲ್: ಬೋಪಾಲ್ ಡಿವಿಷನ್ ಕ್ರಿಕೆಟ್ ಅಸೋಸಿಯೇಷನ್(ಬಿಡಿಸಿಎ)ನ ಅಧ್ಯಕ್ಷರಾಗಿ ಕಾಂಗ್ರೇಸ್ ಶಾಸಕ ಆರಿಫ್ ಅಕೀಲ್ ಆಯ್ಕೆಯಾಗಿದ್ದು, ಅರುಣೇಶ್ವರ್ ಸಿಂಗ್ ಡಿಯೊ ಅವರನ್ನು ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಆರಿಫ್ ಅಕೀಲ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಿಡಿಸಿಎ ಮಹಾ ಮಂಡಳಿ ಸಭೆಯ ವೇಳೆ ಚುನಾವಣೆಯನ್ನು ನಡೆಸಲಾಗಿತ್ತು.
ಬಿಡಿಸಿಎ 151 ಸದಸ್ಯರಲ್ಲಿ 90 ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದು, ಆರಿಫ್ ಅಕೀಲ್ ಅವರನ್ನು ಅವಿರೋಧವಾಗಿ ಬಿಡಿಸಿಎನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಬಿಸಿಎಯನ ಮತ್ತೊಂದು ಬಣದ ಮುಖ್ಯಸ್ಥರಾದ ಬಿಜೆಪಿ ಶಾಸಕ ಧ್ರುವ ನಾರಾಯಣ್ ಸಿಂಗ್ ಈ ಚುನಾವಣೆಯಲ್ಲಿ ಭಾಗವಹಿಸಿದ ಸದಸ್ಯರು ಸಂಸ್ಥೆಯ ಪೂರ್ಣಪ್ರಮಾಣದ ಸದಸ್ಯರಲ್ಲ ಹಾಗಾಗಿ ಈ ಚುಣಾವಣೆ ಕಾನೂನು ಬಾಹೀರ ಎಂದು ತಿಳಿಸಿದ್ದಾರೆ.