ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹರ್ಬಲ್‌ಲೈಫ್‌ಗೆ ಗಿರೀಶ್ ರಾಯಭಾರಿ

Mainashree
Updated On : 14 Feb 2013, 11:48 am

ನವದೆಹಲಿ: ಲಂಡನ್‌ನ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಕರ್ನಾಟಕದ ಕುವರ ಗಿರೀಶ್ ಹೊಸನಗರ ನಾಗರಾಜೇಗೌಡ ಈಗ ಪೌಷ್ಠಿಕ ಕಂಪನಿಯಾದ ಹರ್ಬಲ್ ಲೈಫ್‌ಗೆ ರಾಯಭಾರಿಯಾಗಿದ್ದಾರೆ. ಜಾಗತಿಕ ಪೌಷ್ಠಿಕ ಕಂಪನಿಯಾದ ಹರ್ಬಲ್‌ಲೈಫ್ ಲಂಡನ್‌ನ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಗಿರೀಶ್ ಹೊಸನಗರ ನಾಗರಾಜೇಗೌಡ ಅವರನ್ನು ಕಂಪನಿಯ ರಾಯಭಾರಿಯನ್ನಾಗಿ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಇದು ನನಗೆ ಸಿಕ್ಕಿರುವ ಮೊದಲ ಖಾಸಗಿ ಪ್ರಾಯೋಜಕತ್ವವಾಗಿದೆ. ಹರ್ಬಲ್‌ಲೈಫ್ ಜತೆಗೆ ಒಪ್ಪಂದ ಮಾಡಿಕೊಂಡಿರುವುದು ಖಷಿ ನೀಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement