ಕರ್ವಾನ ವಿರುದ್ಧ ಆನಂದ್ಗೆ ಡ್ರಾ
ಬಡೆನ್ ಬಡೆನ್: ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತಮ್ಮ ಡ್ರಾ ಫಲಿತಾಂಶದ ಸರಣಿಯನ್ನು ಮುಂದುವರೆಸಿದ್ದು, ಗ್ರೆಂಕ್ ಕ್ಲಾಸಿಕ್ ಚೆಸ್ ಚಾಂಪಿಯನ್ಷಿಪ್ನ ಏಳನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಫ್ಯಾಬಿಯಾನೊ ಕರ್ವಾನ ವಿರುದ್ಧ ಡ್ರಾ ಮಾಡಿಕೊಂಡಿದ್ದಾರೆ. ಈ ಮೂಲಕ ಪಂದ್ಯಾವಳಿಯ ಏಳು ಸುತ್ತುಗಳಲ್ಲಿ 6 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, ಜರ್ಮನಿಯ ಅರ್ಕಾಡಿಸ್ಕ್ ನಾಡಿಸ್ಕ್ ವಿರುದ್ಧ ಗೆಲುವು ಕಂಡಿದ್ದಾರೆ. ಆನಂದ್ ಇದುವರೆಗೂ 4 ಅಂಕಗಳನ್ನು ಪಡೆದಿದ್ದು ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಕರ್ವಾನ 4.5 ಅಂಕಗಳೊಂದಿಗೆ ತಮ್ಮ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಜರ್ಮನಿಯ ಮೈಕಲ್ ಆ್ಯಡಮ್ಸ್ ತಮ್ಮ ಎದುರಾಳಿಯಾದ ಜರ್ಮನಿಯ ಅರ್ಕಾಡಿಸ್ಕ್ ನಾಡಿಸ್ಕ್ ವಿರುದ್ಧ ಡ್ರಾ ಸಾಧಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಜಾರ್ಜ್ ಮಿಯರ್ ತಮ್ಮ ಪ್ರತಿ ಸ್ಫರ್ಧಿ ಡೇನಿಯಲ್ ಫ್ರಿಡ್ಮನ್ ಅವರ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.