ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕೇಪ್‌ಟೌನ್ ಟೆಸ್ಟ್: ಪ್ರತಿರೋಧ ತೋರಿದ ಪಾಕಿಸ್ತಾನ

Rashmi Kasaragodu
Updated On : 15 Feb 2013, 10:39 am

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಆರಂಭಿಕ ಕುಸಿತ ಕಂಡಿದ್ದ ಪಾಕ್ ತಂಡ, ಮೊದಲ ಇನಿಂಗ್ಸ್‌ನಲ್ಲಿ 338ರನ್ ಕಲೆ ಹಾಕಿತು. ನಂತರ ಪಾಕ್‌ನ ಸಯದ್ ಅಜ್ಮಲ್ ಅವರ ಸ್ಪಿನ್ ಮೋಡಿಗೆ ಪರದಾಡಿದ ಹರಿಣಗಳ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಉತ್ತಮ ಪ್ರತಿರೋಧ ತೋರಿರುವ ಪಾಕ್, ಹರಿಣಗಳಿಗೆ ಉತ್ತಮ ಹೋರಾಟ ನೀಡುವ ಸೂಚನೆ ನೀಡಿದೆ. ಮೊದಲ ದಿನಾಂತ್ಯಕ್ಕೆ 253/5 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ತಂಡ ಎರಡನೇ ದಿನ 338 ರನ್‌ಗಳಿಗೆ ಆಲೌಟ್ ಆಯಿತು.
ನಂತರ ತಮ್ಮ ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪತ್ರಿಕೆ ಮುದ್ರಣಕ್ಕೆ ಹೊಗುವ ವೇಳೆಗೆ 4 ವಿಕೆಟ್‌ಗೆ 102 ರನ್ ಗಳಿಸಿತ್ತು. ಡುಪ್ಲಿಸಿಸ್ ಅಜೇಯ 28 ರನ್‌ಗಳಿಸಿ ಕ್ರಿಸ್‌ನಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement