ಕ್ವಾರ್ಟರ್ಫೈನಲ್ಗೆ ನಡಾಲ್
ಸಾವ್ ಪಾಲೊ: ಇಲ್ಲಿ ನಡೆಯುತ್ತಿರುವ ಬ್ರೆಜಿಲ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ರಫೆಲ್ ನಡಾಲ್ ಉತ್ತಮ ಪ್ರದರ್ಶನ ನೀಡಿದ್ದು, ತಮ್ಮ ಎದುರಾಳಿ ಬ್ರಾಜಿಲ್ನ ಜೋ ಸೋಜಾ ವಿರುದ್ಧ 6-3, 6-4 ನೇರ ಸೆಟ್ಗಳ ಜಯ ದಾಖಲಿಸಿ ಕ್ವಾರ್ಟರ್ಫೈನಲ್ಗೆ ಕಾಲಿಟ್ಟಿದ್ದಾರೆ. ನಡಾಲ್ ತಮ್ಮ ಮುಂದಿನ ಹಂತದಲ್ಲಿ ಅರ್ಜೆಟೀನಾದ ಕಾರ್ಲೊಸ್ ಬರ್ಲೊಕ್ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದಾಗಿ ವೃತ್ತಿಪರ ಟೆನಿಸ್ನಿಂದ ದೂರ ಉಳಿದಿದ್ದ ನಡಾಲ್, ಮತ್ತೆ ಟೆನಿಸ್ ಕ್ಷೇತ್ರಕ್ಕೆ ವಾಪಸ್ಸಾದ ನಂತರ, ಬ್ರೆಜಿಲ್ ಓಪನ್ ಪಂದ್ಯಾವಳಿ ಅವರ ಎರಡನೇ ಪಂದ್ಯಾವಳಿಯಾಗಿದೆ.