ಲಿಮ್ಕಾ ಬುಕ್ಗೆ ಖಾರ್ವಿ ಸಾಧನೆ
ಉಡುಪಿ: ಪೋಲಿಯೊ ಪೀಡಿತ ಕಾಲಿನೊಂದಿಗೆ, ಕೈಗಳೆರಡನ್ನೂ ಬೆನ್ನ ಹಿಂದೆ ಪೊಲೀಸ್ ಕೋಳಗಳಿಂದ ಬಿಗಿದುಕೊಂಡು ಸುಮಾರು 3.33 ನಾಟಿಕಲ್ ಮೈಲಿ (6 ಕಿ.ಮೀ.) ದೂರವನ್ನು 7 ಗಂಟೆಗಳಲ್ಲಿ ಕ್ರಮಿಸಿದ ಜಿಲ್ಲೆಯ ಸಾಧಕ ಪ್ರಕಾಶ್ ಖಾರ್ವಿಗೆ 'ಲಿಮ್ಕಾ ಬುಕ್ ಆಫ್ ರೆಕಾರ್ಡ್' ಮಾನ್ಯತೆ ದೊರಕಿದೆ.
ಉಡುಪಿ ಜಿಲ್ಲೆಯ ಕೋಡಿ ಕನ್ಯಾನ ಗ್ರಾಮದ 35 ವರ್ಷದ ಪ್ರಕಾಶ್ ಖಾರ್ವಿ ಪೋಲಿಯೊ ಪೀಡಿತರು. ಅವರು 2011ರ ಫೆ.7ರಂದು ಮಲ್ಪೆ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್ವರೆಗೆ ಕ್ರಮಿಸಿ ಈ ವಿಕ್ರಮ ಸಾಧಿಸಿದ್ದಾರೆ.