ವಿಂಡೀಸ್ ತಂಡ ಶ್ಲಾಘಿಸಿದ ಹಂಟ್
ಆಂಟಿಗುಹಾ: ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ಗೆ ಪ್ರವೇಶಿಸಿರುವ ವೆಸ್ಟ್ ಇಂಡೀಸ್ ತಂಡದ ಸಾಧನೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜೂಲಿಯನ್ ಹಂಟ್ ಅಭಿನಂದನೆ ಸಲ್ಲಿಸಿದ್ದಾರೆ. ಮಹಿಳಾ ತಂಡದ ಆಟಗಾರ್ತಿಯರು ಅತ್ಯಂತ ಶ್ರಮವಹಿಸಿದ್ದು, ಈ ಹಿಂದೆ ವಿಂಡೀಸ್ ಮಹಿಳಾ ಕ್ರಿಕೆಟ್ ತಂಡ ಮಾಡದ ಸಾಧನೆಯನ್ನು ಮಾಡಿದ್ದಾರೆ. ಕಳೆದ ವರ್ಷ ಪುರುಷರ ತಂಡ ಟಿ20 ವಿಶ್ವಕಪ್ ಗೆದ್ದಿದ್ದು, ಈಗ ಮಹಿಳಾ ತಂಡ ವಿಶ್ವಕಪ್ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿರುವುದು ವಿಂಡೀಸ್ ಕ್ರಿಕೆಟ್ ಬೆಳವಣಿಗೆಯ ಸೂಚಕವಾಗಿದೆ ಎಂದು ಜೂಲಿಯನ್ ಹಂಟ್ ತಿಳಿಸಿದ್ದಾರೆ.