ವೈಜಾಗ್, ಕೋಲ್ಕತಾ ಚಾಂಪಿಯನ್
ಮಂಗಳೂರು: ಪಣಂಬೂರಿನ ಎನ್ಎಂಪಿಟಿಯಲ್ಲಿ ಮೂರು ದಿನಗಳ ಕಾಲ ನಡೆದ ಟೇಬಲ್ ಟೆನಿಸ್ ಹಾಗೂ ಟೆನಿಸ್ ಪಂದ್ಯಾವಳಿ ಶುಕ್ರವಾರ ಮುಕ್ತಾಯವಾಯಿತು. ಟೆನಿಸ್ನಲ್ಲಿ ವಿಶಾಖಪಟ್ಟಣ ಬಂದರು ತಂಡ ಸಮಗ್ರ ಚಾಂಪಿಯನ್ಶಿಪ್ ಗಳಿಸಿಕೊಂಡರೆ, ಟೇಬಲ್ ಟೆನಿಸ್ನಲ್ಲಿ ಕೋಲ್ಕತಾ ಬಂದರು ತಂಡ ಸಮಗ್ರ ಚಾಂಪಿಯನ್ ಆಗಿ ಮೂಡಿಬಂತು. ಕಾಂಡ್ಲಾ, ವಿಶಾಖಪಟ್ಟಣ, ಜೆಎನ್ಪಿಟಿ, ಮುಂಬೈ, ಪರದೀಪ್, ಕೋಲ್ಕತಾ, ಚೆನ್ನೈ ಮತ್ತು ಎನ್ಎಂಪಿಟಿ ಬಂದರು ತಂಡಗಳು ಭಾಗವಹಿಸಿದ್ದವು.
ಟೆನಿಸ್ ಹಿರಿಯ ನಾಗರಿಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗಳಿಸಿದ ಎನ್ಎಂಪಿಟಿಯ ಸುಕುಮಾರ್, ಹಿರಿಯರ ಡಬಲ್ಸ್ನಲ್ಲಿ ಚೋಕೋ ಅವರೊಂದಿಗೆ ಚಾಂಪಿಯನ್ ಪಟ್ಟವನ್ನೇರಿದರು. ಟೇಬಲ್ ಟೆನಿಸ್ (ಹಿರಿಯ) ಡಬಲ್ಸ್ನಲ್ಲಿ ಮುಂಬೈನ ಯಶವಂತ್ ಭೂಹಿರ್ ಮತ್ತು ಬಾಬ್ಜಿ ಸಾಡ್ಯೇ ಎನ್ಎಂಪಿಟಿಯ ಯು. ನಾಗರಾಜ್ ಶೇಟ್ ಹಾಗೂ ಸುನಿಲ್ ಫುರ್ಟಾಡೊ ಅವರನ್ನು ಸೋಲಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಹಿರಿಯ ನಾಗರಿಕರ ವಿಭಾಗದಲ್ಲಿ ಎನ್ಎಂಪಿಟಿಯ ಪಿ.ಸಿ.ಚಾಕೋ ಮತ್ತು ಸುಕುಮಾರ್ ಪ್ರಥಮ ಸ್ಥಾನ ಪಡೆದರು.