ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆನಂದಬಾಷ್ಪ ಸುರಿಸಿದ ಸೆರೆನಾ

Parashurama
Updated On : 16 Feb 2013, 10:05 am

ವಾಶಿಂಗ್ಟನ್: ವಿಶ್ವ ಮಹಿಳಾ ಟೆನಿಸ್‌ನಲ್ಲಿ ತನ್ನದೇ ಆದ ಖ್ಯಾತಿಗಳಿಸಿರುವ ಅಮೆರಿಕಾದ ಸೆರೆನಾ ವಿಲಿಯಮ್ಸ್, ಈಗ ಹೊಸದೊಂದು ದಾಖಲೆ ಬರೆದ ಸಂತೋಷದಲ್ಲಿ ಕಣ್ಣೀರಿಟ್ಟಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ ಖತಾರ್ ಓಪನ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಅವರನ್ನು ಸೋಲಿಸುವ ಮೂಲಕ, ನಂ.1 ಸ್ಥಾನವನ್ನು ಉಳಿಸಿಕೊಂಡ ಹಿರಿಯ ಟೆನಿಸ್ ಆಟಗಾರ್ತಿ ಎಂಬ ಹೊಸ ದಾಖಲೆ ಬರೆದರು. 31 ವರ್ಷದ ಸೆರೆನಾ 2011ರಲ್ಲಿ ತೀವ್ರ ಗಾಯದ ಸಮಸ್ಯೆಗೆ ಒಳಗಾಗಿದ್ದರು. ನಂತರ ಮತ್ತೆ ಕಣಕ್ಕಿಳಿದ ಸೆರೆನಾ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement