ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆನಂದ್‌ಗೆ ಡ್ರಾ, ಕರ್ವಾನಗೆ ಮುನ್ನಡೆ

Parashurama
Updated On : 16 Feb 2013, 10:05 am

ಬಡೆನ್ ಬಡೆನ್: ಗ್ರೆಂಕ್ ಕ್ಲಾಸಿಕ್ ಚೆಸ್ ಪಂದ್ಯಾವಳಿಯಲ್ಲಿ ಭಾರತದ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸತತವಾಗಿ ಡ್ರಾ ಫಲಿತಾಂಶವನ್ನು ಪಡೆಯುತ್ತಿದ್ದು, ಶನಿವಾರ ನಡೆದ ಏಂಟನೇ ಸುತ್ತಿನಲ್ಲಿ ಜರ್ಮನಿಯ ಜಾರ್ಜ್ ಮಿಯರ್ ವಿರುದ್ಧವು ಡ್ರಾ ಸಾಧಿಸಿದ್ದಾರೆ.ಈ ಪಂದ್ಯದಲ್ಲಿ ಬಿಳಿ ಕಾಯಿಯನ್ನು ಬಳಸಿದ ಆನಂದ್ ಉತ್ತಮ ಪ್ರದರ್ಶನ ನೀಡಿದರು. ಆದರೆ ಗೆಲುವಿನ ಸನಿಹದಲ್ಲಿ ಅವಕಾಶ ಕಳೆದುಕೊಂಡ ಆನಂದ್ ಅಂತಿಮವಾಗಿ ಡ್ರಾಗೆ ತೃಪ್ತಿಪಟ್ಟರು.
ಇನ್ನೊಂದೆಡೆ ಇಟಲಿಯ ಫ್ಯಾಬಿಯಾನೊ ಕರ್ವಾನ ಈ ಸುತ್ತಿನಲ್ಲಿ  ಜರ್ಮನಿಯ ಅರ್ಕಾಡಿ ನಾಡಿಸ್ಕ್ ವಿರುದ್ಧ ಜಯ ಸಾಧಿಸಿ ತಮ್ಮ ಮುನ್ನಡೆಯನ್ನು ವಿಸ್ತರಿಸಿದರು. 10 ಸುತ್ತುಗಳ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ 8 ಸುತ್ತುಗಳು ಮುಕ್ತಾಯಗೊಂಡಿದ್ದು, ಎರಡು ಸುತ್ತುಗಳು ಬಾಕಿ ಇದೆ. ಇದುವರೆಗೂ 5.5 ಅಂಕಗಳನ್ನು ಪಡೆದಿರುವ ಕರ್ವಾನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, 4.5 ಅಂಕಗಳನ್ನು ಪಡೆದಿರುವ ಆನಂದ್ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಉಳಿದಿರುವ ಎರಡು ಸುತ್ತುಗಳಲ್ಲಿ ಆನಂದ್ ಉತ್ತಮ ಪ್ರದರ್ಶನ ನೀಡಿ ಉತ್ತಮ ಫಲಿತಾಂಶ ಪಡೆಯಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement