ಪಿಎಸ್ಎಲ್: ಅಧಿಕಾರಿಗಳ ರಾಜಿನಾಮೆ
ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕನಸಿನ ಕೂಸಾಗಿದ್ದ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್)ಟಿ20 ಪಂದ್ಯಾವಳಿ ಆರಂಭಕ್ಕೂ ಮುನ್ನವೆ ಕೊನೆಯಾಗುವ ಸೂಚನೆಗಳು ಕಾಣುತ್ತಿವೆ. ಇತ್ತೀಚೆಗೆ ಈ ಪಂದ್ಯಾವಳಿ ಮುಂದೂಡಲ್ಪಟ್ಟ ಹಿನ್ನಲೆಯಲ್ಲಿ, ಪಿಎಸ್ಎಲ್ನ ಹಿರಿಯ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಈ ಪಂದ್ಯಾವಳಿಯನ್ನು ಮುಂದೂಡಲ್ಪಟ್ಟ ವಿಷಯವನ್ನು ಪಿಸಿಬಿ ಅಧಿಕೃತವಾಗಿ ತಿಳಿಸಿದ ಎರಡೇ ದಿನಗಳಲ್ಲಿ ಪಿಎಸ್ಎಲ್ನ ವ್ಯವಸ್ಥಾಪಕ ನಿರ್ದೇಶಕ ಸರ್ವಾರ್ ಸಲ್ಮಾನ್ ಬಟ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಪಿಎಸ್ಎಲ್ನ ಆರ್ಥಿಕ ಕಾರ್ಯಾಚರಣೆಯ ಮುಖ್ಯಸ್ಥ ಖರುಮ್ ಮಲಿಕ್ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.