ಗಂಭೀರ್ ಅಲಭ್ಯತೆ ಆಸೀಸ್ಗೆ ವರದಾನ
ಮೆಲ್ಬರ್ನ್: ಭಾರತದ ಎಡಗೈ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್ಪಂದ್ಯಕ್ಕೆ ಅಲಭ್ಯರಾಗಿರುವುದು, ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ವರದಾನವಾಗಲಿದೆ ಎಂದು ಆಸೀಸ್ನ ಮಾಜಿ ಬ್ಯಾಟ್ಸ್ಮನ್ ಮ್ಯಾಥ್ಯೂ ಹೆಡನ್ ಅಭಿಪ್ರಾಯ ಪಟ್ಟಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ವೀರೇಂದ್ರ ಸೆಹ್ವಾಗ್ ಜತೆಗೆ ಅದ್ಭುತ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದು, ಎದುರಾಳಿ ತಂಡದಲ್ಲಿ ಈ ಎಡಗೈ ಬ್ಯಾಟ್ಸ್ಮನ್ ಇಲ್ಲದಿರುವುದು ಆಸೀಸ್ ಬೌಲರ್ಗಳಿಗೆ ವರದಾನವಾಗದಲಿದೆ. ಭಾರತ ತಂಡ ಗಂಭೀರ್ ಅವರನ್ನು ಕೈಬಿಟ್ಟಿರುವುದರಿಂದ ಆಸೀಸ್ ತಂಡಕ್ಕೆ ಅನುಕೂಲವಾಗಿದೆ. ಗಂಭೀರ್ ಹಾಗೂ ಸೆಹ್ವಾಗ್ರ ಆರಂಭಿಕ ಜೋಡಿ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದು, ಆಸ್ಟ್ರೇಲಿಯಾ ತಂಡದ ವಿರುದ್ಧ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ.