ಭ್ರಷ್ಟರಿಗೆ ಮತ್ತೆ ಕ್ರೀಡಾ ಅಧಿಕಾರ
ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದ ಅಧಿಕಾರಿಯಾದ ರಾಜ್ಕುಮಾರ್ ಸಾಕೇತಿ ಅವರನ್ನು ಲೂಸೋಫೋನಿಯಾ ಕ್ರೀಡಾಕೂಟಕ್ಕೆ ಸಲಹೆಗಾರರನ್ನಾಗಿ ಕೇರಳ ಸರ್ಕಾರ ನೇಮಿಸಿದೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಜಂಟಿ ಪ್ರಧಾನ ನಿರ್ದೇಶಕರಾಗಿದ್ದ ಸಾಕೇತಿ, ಈ ಕ್ರೀಡಾಕೂಟದಲ್ಲಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಹಾಗೆಯೇ ಈ ಕ್ರೀಡಾಕೂಟದ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿಯವರ ಆಪ್ತರಲ್ಲಿ ಒಬ್ಬರಾಗಿದ್ದು, ಇವರ ಜತೆಗೆ ಕಾಮನ್ವೆಲ್ತ್ನ ಮತ್ತೊಬ್ಬ ಅಧಿಕಾರಿಯಾದ ವಿ.ವಿ ಸಕ್ಸೇನಾ ಅವರನ್ನು ಕೇರಳ ಸರ್ಕಾರ ಸಲಹೆಗಾರರನ್ನಾಗಿ ಆಯ್ಕೆ ಮಾಡಿದೆ.
ಇದೆವೇಳೆ ಕೇರಳ ಸರ್ಕಾರದ ಯುವಜನ ಹಾಗೂ ಕ್ರೀಡಾ ನಿರ್ದೇಶನಾಲಯಗಳಲ್ಲಿ ಸೇವೆಸಲ್ಲಿಸಿರುವ ರೊಕ್ ದೈಸ್ ಹಾಗೂ ಡಾ.ಸೂಸನ್ ಡಿಸೋಜಾ, ಅವರಿಗೆ ಈ ಹುದ್ದೆ ಅಲಂಕರಿಸುವ ಅರ್ಹತೆ ಇದ್ದರೂ ಇವರನ್ನು ಕಡೆಗಣಿಸಲಾಗಿದೆ.