ಮಂಗಳವಾರ ರೀವಾ ಅಂತ್ಯಕ್ರಿಯೆ
ಜೊಹಾನ್ಸ್ಬರ್ಗ್: ಬ್ಲೇಡ್ ರನ್ನರ್ ಖ್ಯಾತಿಯ ಪಿಸ್ಟೋರಿಯಸ್ನ ಪ್ರೇಯಸಿ ರೀವಾ ಸ್ಟೀನ್ಕಾಂಪ್ ಅವರ ಮೃತ ದೇಹ ಆಕೆಯ ತವರಾದ ಪೋರ್ಟ್ ಎಲಿಜಬೆತ್ಗೆ ಬಂದಿದ್ದು, ದೇಹವನ್ನು ಆಕೆಯ ಕುಟುಂಬಕ್ಕೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರೀವಾ ಸಂಬಂಧಿಕರು ಮಂಗಳವಾರ ಆಕೆಯ ಅಂತಿಮ ಸಂಸ್ಕಾರ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆಂದು ತಿಳಿಸಿದರು.
ಮಂಗಳವಾರ ರೀವಾಳ ಅಂತ್ಯಕ್ರಿಯೆಯನ್ನು ಖಾಸಗಿಯಾಗಿ ನಡೆಸಲಾಗುವುದು. ಈ ವೇಳೆ ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಪ್ರವೇಶವಿಲ್ಲ ಎಂದು ರೀವಾ ಕುಟುಂಬದವರು ತಿಳಿಸಿದ್ದಾರೆ.