2013ರಲ್ಲಿ ನಾಲ್ಕು ರ್ಯಾಂಕಿಂಗ್ ಟೂರ್ನಿ
ಹೈದರಾಬಾದ್: ಭಾರತೀಯ ಆರ್ಚರಿ ಅಸೋಸಿಯೇಷನ್ ತನ್ನ ಸದಸ್ಯ ಸಂಸ್ಥೆಗಳೊಂದಿಗೆ ಪ್ರಸಕ್ತ ವರ್ಷದಲ್ಲಿ ಒಟ್ಟು ನಾಲ್ಕು ರಾಷ್ಟ್ರೀಯ ರ್ಯಾಂಕಿಂಗ್ ಪಂದ್ಯಾವಳಿಗಳನ್ನು ನಡೆಸಲಿದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಭಾರತ ತಂಡವನ್ನು ಈ ಪಂದ್ಯಾವಳಿಗಳಿಂದಲೇ ಆಯ್ಕೆ ಮಾಡಲಾಗುತ್ತದೆ ಎಂದು ಭಾರತೀಯ ಆರ್ಚರಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅನಿಲ್ ಕಾಮಿನೆನಿ ಅವರು ಹೇಳಿದ್ದಾರೆ. ಪ್ರಸಕ್ತ ವರ್ಷದಲ್ಲಿ ನಡೆಯಲಿರುವ ಎಲ್ಲ ಪಂದ್ಯಾವಳಿಗಳಲ್ಲಿ ಉತ್ತಮ ಸಾಧನೆ ಮಾಡಿದ ಸ್ಪರ್ಧಿಗಳಿಗೆ ಒಟ್ಟು ರು. 25 ಲಕ್ಷ ಬಹುಮಾನ ನೀಡಲಾಗುತ್ತದೆ.