ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಸ್ಕ್ವಾಷ್: ಸೆಮೀಸ್‌ಗೆ ಭಾರತೀಯರು

Parashurama
Updated On : 22 Feb 2013, 11:42 am

ಸಿಯೋಲ್: ಎದುರಾಳಿ ತಂಡದ ನಿರೀಕ್ಷೆಗೆ ಸಿಕ್ಕದ ಪ್ರದರ್ಶನ ತೋರುತ್ತಿರುವ ಭಾರತದ ಬಾಲಕ ಮತ್ತು ಬಾಲಕಿಯರ ತಂಡಗಳು 16ನೇ ಏಷ್ಯನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿವೆ.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬಾಲಕರ ತಂಡ ಇರಾನ್ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದರೆ, ಬಾಲಕಿಯರ ತಂಡ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ವಿರುದ್ಧ 3-0 ಅಂತರದಿಂದ ಜಯ ಕಂಡುಕೊಂಡಿತು.
ತಮ್ಮ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿ ಬಾಲಕರ ತಂಡ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇರಾನ್ ಆಟಗಾರರನ್ನು ಸುಲಭವಾಗಿ ಮಣಿಸುವಲ್ಲಿ ಯಶಸ್ವಿಯಾದರು. ಮಹೇಶ್ ಮಂಗಾವ್ಕರ್ ಅವರು ಇರಾನ್‌ನ ಫರ್ಜಾದ್ ಶೋಕೌಯಿ ಅವರನ್ನು 11-8, 11-6, 11-2 ಸೆಟ್‌ಗಳ ಅಂತರದಿಂದ ಪರಾಭವಗೊಳಿಸದರು. ಆರಂಭಿಕ ಪಂದ್ಯದಲ್ಲಿ ಕುಷ್ ಕುಮಾರ್ ಅವರು ಸೋಹೈಲ್ ಶಮೆಲಿ ಅವರನ್ನು 11-2, 11-2, 15-13 ಸೆಟ್‌ಗಳಿಂದ ಸೋಲಿಸಿದರು. ಇನ್ನು ದೀಪಕ್ ಮಿಶ್ರಾ ಅವರು ಅಲಿರೆಜಾ ಶಾಮೆಲಿ ಅವರನ್ನು 11-6, 11-2 ಸೆಟ್‌ಗಳಿಂದ ಪರಾಭವಗೊಳಿಸಿದರು. ಬಾಲಕರ ತಂಡ ಸೆಮಿಫೈನಲ್ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಸೆಣಸಲಿದೆ.
ಅನಕಾ ಅಲಂಕಾಮೋನಿ ನಾಯಕತ್ವದ ಬಾಲಕಿಯರ ತಂಡ, ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ವಿರುದ್ಧ ಸುಲಭ ಜಯ ಕಂಡುಕೊಂಡಿತು.
ಮೊದಲ ಪಂದ್ಯದಲ್ಲಿ ಅನಕಾ ಜಪಾನ್‌ನ ರಿಸಾ ಸುಗಿಮೋತೋ ಅವರನ್ನು 11-3, 11-6, 11-8 ಸೆಟ್‌ಗಳಿಂದ ಸೋಲಿಸಿದರೆ, ಅಪರಾಜಿತಾ ಬಾಲಮುರಗನ್ ಅವರು ಸಾತೋಮಿ ವಾಟಾನಾಬೆ ವಿರುದ್ಧ 11-5, 11-4, 6-11, 11-4 ಸೆಟ್‌ಗಳ ಅಂತರದಿಂದ ಜಯ ಕಂಡುಕೊಂಡರು. ಲಕ್ಷ್ಯ ರಾಘವೇಂದ್ರನ್ ಅವರು ಹಿನಾಕೋ ಸಾಕೈ ಅವರನ್ನು 11-4, 11-2, 11-4 ಸೆಟ್‌ಗಳಿಂದ ಪರಾಭವಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement