ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಾನಿಯಾ- ಬೆಥಾನಿ ಫೈನಲ್‌ಗೆ

ಸಾನಿಯಾ ಮಿರ್ಜಾ ಋತುವಿನ 2ನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕಾತರದಲ್ಲಿದ್ದಾರೆ.

Parashurama
Updated On : 23 Feb 2013, 12:26 pm

ದುಬೈ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಋತುವಿನ 2ನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕಾತರದಲ್ಲಿದ್ದಾರೆ. ಸಾನಿಯಾ ಮತ್ತು ಅವರ ಜತೆಯಾಟಗಾರ್ತಿ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಜೋಡಿ ದುಬೈ ಡುಟಿ ಫ್ರೀ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಭಾರತ- ಅಮೆರಿಕ ಜೋಡಿ, ಆಸ್ಟ್ರೇಲಿಯಾದ ರೋಡಿನೋವಾ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಜೋಡಿಯನ್ನು 6-2, 7-5 ನೇರ ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿತು.
ಒಂದು ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬ್ಲಾಕ್ ಮತ್ತು ರಾಡಿನೋವಾ ಜೋಡಿಯನ್ನು ಸೋಲಿಸಲು, ಸಾನಿಯಾ, ಬೆಥಾನಿ ಜೋಡಿ ತುಂಬಾ ಕಠಿಣ ಸವಾಲನ್ನು ಎದುರಿಸಿತು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಜಯ ಸಾಧಿಸಿದ ಭಾರತ- ಅಮೆರಿಕ ಜೋಡಿ, ದ್ವಿತೀಯ ಸೆಟ್‌ನಲ್ಲಿ ಕೊಂಚ ಪ್ರತಿರೋಧವನ್ನು ಎದುರಿಸಿತು. ನೂರಿಯಾ ಲಾಗೋಸ್ಟೇರಾ ವಿವೇಸ್ ಮತ್ತು ಜೀ ಝೆಂಗ್ ಜೋಡಿ ನಾಡಿಯಾ ಪೆಟ್ರೋವಾ ಮತ್ತು ಕಾರಿನಾ ಸ್ರೆಬೋಂಟಿಕ್ ಜೋಡಿ ನಡುವೆ ಇನ್ನೊಂದು ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ಜೋಡಿಯನ್ನು ಫೈನಲ್ ಪಂದ್ಯದಲ್ಲಿ ಸಾನಿಯಾ ಮತ್ತು ಬೆಥಾನಿ ಎದುರಿಸಲಿದ್ದಾರೆ.
ಭಾರತ- ಅಮೆರಿಕ ಜೋಡಿ ಕಳೆದ ತಿಂಗಳು ಬ್ರಿಸ್ಬೇನ್ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಋತುವಿನ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement