ಸೆಮಿಫೈನಲ್ಗೆ ಬೋಪಣ್ಣ ಜೋಡಿ
ಭಾರತದ ರೋಹನ್ ಬೋಪಣ್ಣ ಮತ್ತು ಇಂಗ್ಲೆಂಡ್ನ ಕಾಲಿನ್ ಫ್ಲೆಮಿಂಗ್ ಫ್ರಾನ್ಸ್ನಲ್ಲಿ ನಡೆಯುತ್ತಿರುವ ಎಟಿಪಿ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ...
ಮಾರ್ಸಿಲ್ (ಫ್ರಾನ್ಸ್): ಭಾರತದ ರೋಹನ್ ಬೋಪಣ್ಣ ಮತ್ತು ಇಂಗ್ಲೆಂಡ್ನ ಕಾಲಿನ್ ಫ್ಲೆಮಿಂಗ್ ಫ್ರಾನ್ಸ್ನಲ್ಲಿ ನಡೆಯುತ್ತಿರುವ ಎಟಿಪಿ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಭಾರತ- ಇಂಗ್ಲೆಂಡ್ ಜೋಡಿ, ಅಮೆರಿಕದ ಜೇಮ್ಸ್ ಕೆರ್ರೆಟಾನಿ ಮತ್ತು ಕೆನಡಾದ ಆದಿಲ್ ಶಂಸುದ್ದೀನ್ ಜೋಡಿಯನ್ನು 6-3, 6-7(2), 10-7 ಅಂತರದಿಂದ ಸೋಲಿಸಿತು. ಬೋಪಣ್ಣ -ಫ್ಲೆಮಿಂಗ್ ಜೋಡಿ ಸೆಮಿಫೈನಲ್ ಪಂದ್ಯದಲ್ಲಿ ಜೂಲೈನ್- ಫಿಲಿಪ್ ಜೋಡಿಯನ್ನು ಎದುರಿಸಲಿದೆ.