ಸ್ನೂಕರ್ ಮಾಸ್ಟರ್ಸ್ಗೆ ಪಂಕಜ್, ಮೆಹ್ತಾ
ಮುಂಬೈ: ಖ್ಯಾತ ಸ್ನೂಕರ್ ತಾರೆ,ಏಂಟು ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ ಮೇ.6 ರಿಂದ 13ರವರೆಗೆ ನಡೆಯಲಿರುವ 2013ರ ಆರ್ಕೆಜಿ ಖಾರ್ ಜಿಮ್ಕಾನ ಸ್ನೂಕರ್ ಮಾಸ್ಟರ್ಸ್ನಲ್ಲಿ ಭಾಗವಹಿಸಲಿದ್ದಾರೆ. ಇದು ಭಾರತದ ಅತಿ ದೊಡ್ಡ ಪಂದ್ಯಾವಳಿಯಾಗಿದ್ದು, ಪಂಕಜ್ ಹಾಗೂ ಆದಿತ್ಯ ಮೆಹ್ತಾ ಜತೆಗೆ ಯಾಸಿನ್ ಮರ್ಚೆಂಟ್ ಕೂಡ ಭಾಗವಿಹಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಅಮೆರಿಕಾದ ನಾಲ್ವರು ಅಗ್ರ ಸ್ನೂಕರ್ ಆಟಗಾರರು ಭಾಗವಹಿಸಲಿದ್ದು, ಚೆನೈ, ದೆಹಲಿ, ಕೊಲ್ಕತ್ತಾ ಮತ್ತು ಪುಣೆಯಿಂದ ಆಯ್ಕೆಯಾದ 16 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.