ಬಿಬಿಸಿಯಲ್ಲಿ ಸೂಸಿ
ಫಾರ್ಮುಲಾ ಒನ್ ರೇಸ್‌ನ ಮಹಿಳಾ ಟೆಸ್ಟ್ ಡ್ರೈವರ್ ಆಗಿರುವ ಸೂಸಿ ವೂಲ್ಫ್ ಅವರು ಬಿಬಿಸಿಯ ಸಾಕ್ಷ್ಯಚಿತ್ರವೊಂದರಲ್ಲಿ ...
ಫಾರ್ಮುಲಾ ಒನ್ ರೇಸ್‌ನ ಮಹಿಳಾ ಟೆಸ್ಟ್ ಡ್ರೈವರ್ ಆಗಿರುವ ಸೂಸಿ ವೂಲ್ಫ್ ಅವರು ಬಿಬಿಸಿಯ ಸಾಕ್ಷ್ಯಚಿತ್ರವೊಂದರಲ್ಲಿ ನಟಿಸುವುದಾಗಿ ಘೋಷಿಸಿದ್ದಾರೆ. ಫಾರ್ಮುಲಾ ಒನ್ ರೇಸಿಂಗ್ ಬೆಳೆದು ಬಂದ ರೀತಿಯ ಬಗ್ಗೆ ಮೂಡಿ ಬರಲಿರುವ ಈ ಸಾಕ್ಷ್ಯಚಿತ್ರದಲ್ಲಿ ಸುಸಿ ಅವರದ್ದೂ ಒಂದು ಕಂತು ಇರುತ್ತದಂತೆ. ಈ ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ, ಸೂಸಿ ಈಗ ಬಿಬಿಸಿ ಸಾಕ್ಷ್ಯಚಿತ್ರಮೊಂದರಲ್ಲಿ ಕಾಣಿಸಿಕೊಂಡ ಮೊಟ್ಟ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೇವಿಡ್ ಸ್ಟೋಡರ್ಟ್ ಅವರ ನಿರ್ದೇಶನದ ಈ ಸಾಕ್ಷ್ಯಚಿತ್ರದಲ್ಲಿ ಲೀವೀಸ್ ಹ್ಯಾಮಿಲ್ಟನ್ ಸಹಾ ಕಾಣಿಸಿಕೊಳ್ಳಲಿದ್ದಾರಂತೆ.