ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಸೆಹ್ವಾಗ್ ಮೇಲೆ ವಿಶ್ವಾವಿಡೋಣ'

Parashurama
Updated On : 26 Feb 2013, 10:44 am

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧವೂ ಕಳಪೆ ಆಟ ಮುಂದುವರಿಸಿದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ನಾಯಕ ಮಹೇಂದ್ರಸಿಂಗ್ ಧೋನಿ ಸಮರ್ಥಿಸಿಕೊಂಡಿದ್ದಾರೆ. ಸೆಹ್ವಾಗ್ ಅವರು ಫಾರ್ಮ್ ಕಂಡುಕೊಳ್ಳಲು ಇನ್ನೂ ಹೆಚ್ಚಿನ ಕಾಲಾವಕಾಶವನ್ನು ನಾವು ನೀಡಬೇಕು. ಅವರೊಬ್ಬ ಪಂದ್ಯ ಜಯಿಸಿಕೊಡಬಲ್ಲ ಆಟಗಾರ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
'ಫಾರ್ಮ್ ಕಂಡುಕೊಳ್ಳಲು ಸೆಹ್ವಾಗ್ ಅವರಿಗೆ ನಾವು ಇನ್ನೂ ಹೆಚ್ಚಿನ ಸಮಯ ನೀಡಬೇಕು. ಅವರೊಬ್ಬ ಅದ್ಭುತ ಬ್ಯಾಟ್ಸ್‌ಮನ್. ಅವರು ಉತ್ತಮ ರನ್ ಪೇರಿಸುವ ಮುನ್ನ, ಹಲವಾರು ಬಾರಿ ಅವರ ಸೊಗಾಸದ ಬ್ಯಾಟಿಂಗ್ ಬಗ್ಗೆ ನಾನು ವಿವರಿಸಿದ್ದೇನೆ. ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಟಗಾರರಲ್ಲಿ ಸೆಹ್ವಾಗ್ ಸಹ ಒಬ್ಬರು. ಅಂತಹ ಬ್ಯಾಟಿಂಗ್ ಶೈಲಿಯನ್ನು ಹೊಂದಿರುವ ಅವರ ಬ್ಯಾಟಿಂಗ್ ವೈಭವ ನೋಡಲು ನಾವು ಕಾತರದಲ್ಲಿರಬೇಕಷ್ಟೇ' ಎಂದಿದ್ದಾರೆ ಧೋನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement