ಸೋಮದೇವ್ ಎರಡನೇ ಸುತ್ತಿಗೆ
ದುಬೈ: ಭಾರತದ ಸೋಮ್ದೇವ್ ದೇವ್ವರ್ಮನ್ ಅವರು ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್ಷಿಪ್ನ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ರ್ಯಾಂಕಿಂಗ್ನಲ್ಲಿ 315ನೇ ಸ್ಥಾನ ಹೊಂದಿರುವ ಸೋಮ್ದೇವ್ ಅವರು, ಮೊದಲ ಸುತ್ತಿನಲ್ಲಿ ರಷ್ಯಾದ ಐಗೋರ್ ಕುನಿಸ್ತ್ಯಾನ್ ಅವರನ್ನು 6-1, 6-4 ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು.
ಸಿಪ್ರಾಯಿಟ್ ಮ್ಯಾಕ್ರಸ್ ಬಘಾದತೀಸ್ ಮತ್ತು ಅರ್ಜೆಂಟೀನಾದ ಜೂವಾನ್ ಮಾರ್ಟಿನ್ ಡೆಲ್ ಪೆಟ್ರೋವಾ ನಡುವೆ ಇನ್ನೊಂದು ಮೊದಲ ಸುತ್ತಿನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಗೆದ್ದವರ ವಿರುದ್ಧ ಎರಡನೇ ಸುತ್ತಿನಲ್ಲಿ ಸೋಮ್ದೇವ್ ಸೆಣಸಲಿದ್ದಾರೆ.
ರ್ಯಾಂಕಿಂಗ್ನಲ್ಲಿ ತಮಗಿಂತ 167 ಸ್ಥಾನ ಮೇಲಿರುವ ರಷ್ಯಾ ಆಟಗಾರನ ವಿರುದ್ಧ ಸೋಮ್ದೇವ್ ಸಮರ್ಥ ಪ್ರದರ್ಶನ ನೀಡಿದರು.