ಎರಡು ಹೊಸ ಕ್ಲಬ್ಗೆ ಬಿಡ್
ನವದೆಹಲಿ: ಐ ಲೀಗ ಪಂದ್ಯಾವಳಿಗೆ ಸಂಬಂಧಿಸಿದಂತೆ ಕನಿಷ್ಠ ಎರಡು ಹೊಸ ಕ್ಲಬ್ಗಳನ್ನು ಸೇರ್ಪಡಿಸಲು ಮುಂದಾಗಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್ಎಫ್), ಈ ಕುರಿತು ಆಸಕ್ತಿಯುಳ್ಳ ಏಜೆನ್ಸಿಗಳ ಜತೆ ಮುಕ್ತ ಸಭೆ ನಡೆಸಿ ಸಲಹೆಗಳನ್ನು ಪಡೆದು ಅಂತಿಮವಾಗಿ ಹೊಸ ಕ್ಲಬ್ಗಳಿಗೆ ಹರಾಜು ಪ್ರಕ್ರಿಯೆಗೆ ಆಹ್ವಾನ ನೀಡಲು ನಿರ್ಧರಿಸಿದೆ. ಸಭೆಯನ್ನು ಮಾ.5 ರಂದು ಇಲ್ಲಿನ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ ಫುಟ್ಬಾಲ್ ಹೌಸ್ನಲ್ಲಿ ನಡೆಸಲು ಎಐಎಫ್ಎಫ್ ನಿರ್ಧರಿಸಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಯಶಸ್ವಿಯಾಗುವ ಇಬ್ಬರು ಬಿಡ್ಡರ್ಗಳಿಗೆ ಹೊಸ ಫುಟ್ಬಾಲ್ ಕ್ಲಬ್ ಆರಂಭಿಸಿ, 2013ರ ಐಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ. ಒಂದು ವೇಳೆ ಈ ತಂಡ ಅರ್ಹತೆ ಪಡೆದರೆ ಏಷ್ಯನ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಬಹುದಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.