ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜರ್ಮನ್ ಓಪನ್: ಜಯರಾಮ್ ಮುನ್ನಡೆ

Parashurama
Updated On : 27 Feb 2013, 10:46 am

ನವದೆಹಲಿ: ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಜಯರಾಮ್, ಆನಂದ್ ಹಾಗೂ ಅರವಿಂದ್ ಜರ್ಮನಿಯಲ್ಲಿ ನಡೆಯುತ್ತಿರುವ ಜರ್ಮನ್ ಓಪನ್ ಚಾಂಪಿಯನ್‌ಷಿಪ್‌ನ 2ನೇ ಸುತ್ತಿಗೆ ಕಾಲಿಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ 32ನೇ ರ್ಯಾಂಕಿಂಗ್‌ನ ಜಯರಾಮ್ ಫ್ರಾನ್ಸ್‌ನ ಬ್ರಾಸ್ ಲೆವರ್ಡೆಜ್ ವಿರುದ್ಧ 21-12, 21-18 ಸೆಟ್‌ಗಳ ಜಯಸಾಧಿಸಿದ್ದು, 2ನೇ ಸುತ್ತಿನಲ್ಲಿ ಜಪಾನ್‌ನ ರಿಚಿ ಟಕೇಶಿಟಾ ವಿರುದ್ಧ ಸೆಣೆಸಲಿದ್ದಾರೆ.
ಆನಂದ್ ಪವಾರ್ ತಮ್ಮ ಎದುರಾಳಿ ಆಸ್ಟ್ರೀಯಾದ ಮೈಕಲ್ ಲಾನೆಸ್ಟೈರ್ ವಿರುದ್ಧ 22-20, 16-21, 21-16 ಸೆಟ್‌ಗಳ ಅಂತರದಲ್ಲಿ ಮಣಿಸಿದ್ದು, ಪಂದ್ಯಾವಳಿಯ ಆರನೇ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟೊರ್ ಅಕ್ಸೆಲೆನ್ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಇನ್ನು ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಆಟಗಾರ ಅರವಿಂದ್, ಅನೂಪ್ ಶ್ರೀಧರ್ ವಿರುದ್ಧ 21-17, 21-15 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅನೂಪ್ ತಮ್ಮ ಮುಂದಿನ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಬೂನ್ಸಾಕ್ ಪೊಂಸನಾ ವಿರುದ್ಧ ಆಡಲಿದ್ದಾರೆ. ಇನ್ನು ಗುರುಸಾಯಿದತ್, ಚೀನಾದ ಬಿನ್ ಕ್ಯೊ ವಿರುದ್ಧ 17-21, 11-21 ಅಂತರದಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಅರುಣ್ ವಿಷ್ಣು ಹಾಗೂ ಅಪರ್ಣ ಬಾಲನ್ ಜೋಡಿ, ಜರ್ಮನ್‌ನ ಹೇನ್ಸ್ ಕೇಸ್‌ಬೌರ್ ಹಾಗೂ ಕೀರಾ ಕಟೆನ್‌ಬೆಕ್ ವಿರುದ್ಧ 21-15, 21-10 ನೇರ ಸೆಟ್‌ಗಳ ಜಯ ಸಾಧಿಸಿದ್ದಾರೆ. ಈ ಮೂಲಕ ಈ ಜೋಡಿ ಪಂದ್ಯಾವಳಿಯ ಪ್ರಮುಖ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement