ಸಚಿನ್ ಸಾಮರ್ಥ್ಯ ಇನ್ನೂ ಕುಗ್ಗಿಲ್ಲ: ಹೇಡನ್
ನವದೆಹಲಿ: ಭಾರತದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಬಗ್ಗೆ ವಿಶ್ವದಾದ್ಯಂತ ಹಲವು ಹಿರಿಯ ಕ್ರಿಕೆಟರ್‌ಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಚಿನ್ ಎಂಬ ಪುಟ್ಟ ಮನುಷ್ಯನಲ್ಲಿ ಹುಲಿಯೊಂದು ನೆಲೆಸಿದೆ ಎಂದು ಸಚಿನ್ ಅವರ ಸಾಮರ್ಥ್ಯವನ್ನು ಆಸೀಸ್‌ನ ಮಾಜಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಬಣ್ಣಿಸಿದ್ದಾರೆ.
ವಿಮಲ್ ಕುಮಾರ್ ಅವರು ಬರೆದಿರುವ ಸಚಿನ್-ಕ್ರಿಕೆಟರ್ ಆಫ್ ದ ಸೆಂಚುರಿ ಎಂಬ ಪುಸ್ತಕದಲ್ಲಿ ಸಚಿನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮ್ಯಾಥ್ಯೂ ಹೇಡನ್, ನಾನು ಸಚಿನ್ ಹೆಸರನ್ನು ಮೊದಲ ಬಾರಿಗೆ 90ರ ದಶಕದ ಆರಂಭದಲ್ಲಿ ಕೇಳಿದೆ. ಆದರೆ ಸಚಿನ್ ಈ ಮಟ್ಟದವರೆಗೂ ಸ್ಥಾನಮಾನವನ್ನು ಗಳಿಸುವರು ಎಂದೂ ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಸಚಿನ್ ಪುಟ್ಟ ಮನುಷ್ಯನಾದರೂ, ಕ್ರೀಡೆಯಲ್ಲಿ ಅವರು ಸಂಪಾಧಿಸಿರುವ ಘನತೆ ಗೌರವ ಊಹಿಸಲು ಸಾಧ್ಯವಿಲ್ಲ.
ಅವರು ಓರ್ವ ನಿಜವಾದ ಸ್ಫರ್ಧಾತ್ಮಕ ಆಟಗಾರನಮಾಗಿದ್ದು, ಅವರಲ್ಲಿ ಹುಲಿಯೊಂದು ಅಡಗಿದೆ ಎಂಬುದನ್ನು ಅವರ ವಿರುದ್ಧ ಆಡಿದ ನಂತರವಷ್ಟೇ ತಿಳಿದುಕೊಂಡೆ ಎಂದಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.