ಕ್ರೀಡೆ

ಎಂಟರ ಘಟ್ಟಕ್ಕೆ ಅಜರೆಂಕಾ, ಸ್ವೇತ್ಲಾನಾ

ಮೆಲ್ಬರ್ನ್: ವಿಶ್ವವಿಖ್ಯಾತ ಟೆನಿಸ್ ಆಟಗಾರ್ತಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸೋಮವಾರ ನಡೆದ ಪ್ರೀ ಕ್ವಾರ್ಟರ್ ಹಂತದ ಪಂದ್ಯದಲ್ಲಿ ಅವರು ರಷ್ಯಾದ ಎಲಿನಾ ವೆಸ್ನಿನಾ ಅವರನ್ನು 6-1, 6-1 ನೇರ ಸೆಟ್‌ಗಳಲ್ಲಿ ಸೋಲಿಸಿ, ಎಂಟರ ಘಟ್ಟಕ್ಕೆ ಪದಾರ್ಪಣೆ ಮಾಡಿದರು.
ಸೋಮವಾರ ನಡೆದ ಮತ್ತೊಂದು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ರಷ್ಯಾದ ಸ್ವೇತ್ಲಾನಾ ಕುಸ್ನೆತ್ಸೋವಾ ಅವರು ಡೆನ್ಮಾರ್ಕ್‌ನ ಕ್ಯಾರೋಲಿನ್ ವಾವ್ಸಿಂಕಾ ಅವರನ್ನು 6-2, 2-6, 7-5 ಸೆಟ್‌ಗಳ ಅಂತರದಲ್ಲಿ ಸೋಲಿಸಿದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಕ್ಟೋರಿಯಾ ಅಜರೆಂಕಾ ಹಾಗೂ ಕ್ಯಾರೋಲಿನ್ ವಾವ್ಸಿಂಕಾ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
ಸುಲಭ ಜಯ: ವಿಶ್ವದ ಅಗ್ರ ಟೆನಿಸ್ ಆಟಗಾರ್ತಿಯಾಗಿರುವ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರಿಗೆ ತಮ್ಮ ಎದುರಾಳಿ ಎಲಿನಾ ವೆಸ್ನಿನಾ ಅವರನ್ನು ಸೋಲಿಸಲು ಕಷ್ಟವೆನಿಸಲಿಲ್ಲ. ಪಂದ್ಯದ ಆರಂಭದಿಂದಲೇ ತಾವು ಅತ್ಯುತ್ತಮ ಫಾರ್ಮ್‌ನಲ್ಲಿರುವುದನ್ನು ಸಾಬೀತುಪಡಿಸಿದ ಅವರು ವೆಸ್ನಿನಾ ಅವರಿಗೆ ಸವಾಲೆಸೆದರು. ಅಜರೆಂಕಾದ ಈ ಆರ್ಭಟದ ಎದುರು ಮಂಕಾಗಿ ಕಂಡ ವೆಸ್ನಿನಾ, ಪಂದ್ಯದಲ್ಲಿ ಅವರಿಗೆ ಪ್ರತಿರೋಧ ತೋರುವ ಸಾಹಸವನ್ನೇ ಮಾಡಲಿಲ್ಲ. ಹೀಗೇ ಸಾಗಿದ ಮೊದಲ ಸೆಟ್‌ನಲ್ಲಿ ಅಜರೆಂಕಾ ಅವರು 6-1ರ ಸುಲಭ ಜಯ ದಾಖಲಿಸಿದರು.
ಮುಂದಿನ ಸೆಟ್‌ನಲ್ಲೂ ಇದು ಪುನರಾವರ್ತನೆಯಾಯಿತು. ಪ್ರಥಮ ಸೆಟ್‌ನ ಗೆಲುವಿನಿಂದ ಕೊಂಚ ಪ್ರೇರಿತರಾದರಂತೆ ಕಂಡುಬಂದ ಅಜರೆಂಕಾ, ಮತ್ತೆ ಮತ್ತೆ ವೆಸ್ನಿನಾ ಮೇಲೆ ಮುಗಿಬಿದ್ದರು. ಈ ಹಂತದಲ್ಲಿ ವೆಸ್ನಿನಾ ಮಾಡಿದ ತಪ್ಪುಗಳು ಅಜರೆಂಕಾಗೆ ವರದಾನವಾಗಿ ಪರಿಣಮಿಸಿದವು. ಕೇವಲ 33 ನಿಮಿಷಗಳಲ್ಲೇ ಮುಕ್ತಾಯಗೊಂಡ ಈ ಸೆಟ್‌ನಲ್ಲಿ ಅಜರೆಂಕಾ 6-1ರ ಅಂತರದಲ್ಲಿ ಜಯ ಸಾಧಿಸಿ, ಪಂದ್ಯದಲ್ಲಿಯೂ ಜಯಭೇರಿ ಬಾರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ